ನವದೆಹಲಿ, ಆ 08 (DaijiworldNews/PY): ಕೊರೊನಾ ಆಸ್ಪತ್ರೆ ಉದ್ಘಾಟಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ನೋಯ್ಡಾಗೆ ತೆರಳಲಿದ್ದು, ಸೆಕ್ಷನ್ 144 ಅನ್ನು ವಿಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಭೇಟಿಗೆ ಮೊದಲೇ ಸೆಕ್ಷನ್ 144 ಅನ್ನು ನೋಯ್ಡಾದಲ್ಲಿ ವಿಧಿಸಲಾಗಿದ್ದು, ಇದರೊಂದಿಗೆ ಡ್ರೋನ್ಗಳನ್ನು ಹಾರಿಸಲು ಕೂಡಾ ಜನರಿಗೆ ಅವಕಾಶವಿಲ್ಲ. ಇನ್ನು ಕೊರೊನಾ ಪರೀಕ್ಷೆಗೆ 15 ಗೆಜೆಡೆಟ್ ಅಧಿಕಾರಿಗಳು ಸೇರಿದಂತೆ ಕಾರ್ಯನಿರ್ವಹಿಸುತ್ತಿರುವ 700 ಮಂದಿ ಕಾನ್ಸ್ಟೇಬಲ್ಗಳು ಒಳಗಾಗಬೇಕಾಗುತ್ತದೆ ಎಂಬುದಾಗಿ ನೋಯ್ಡಾದ ಎಡಿಸಿಪಿ ರಣವಿಜಯ್ ಸಿಂಗ್ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.
ಯುಪಿಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಕಾರಣ ನೂತನ ಕೊರೊನಾ ಆಸ್ಪತ್ರೆಯನ್ನು ಗೌತಮ ಬುದ್ದ ನಗರ ಜಿಲ್ಲೆಯ ನೋಯ್ಡಾದ ಸೆಕ್ಟರ್ 39ರಲ್ಲಿ ಶನಿವಾರದೊಳಗೆ ಉದ್ಘಾಟನೆ ಮಾಡಲಾಗುತ್ತಿದೆ.
ಶುಕ್ರವಾರ ಗೌತಮ ಬುದ್ದ ನಗರದಲ್ಲಿ 61 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 5,806ಕ್ಕೆ ಏರಿತ್ತು. ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,08,614ಕ್ಕೆ ಏರಿಕೆಯಾಗಿದೆ.