ಮುಂಬೈ, ಆ. 08 (DaijiworldNews/MB) : ಸುಮಾರು ಒಂದು ತಿಂಗಳ ಹಿಂದೆ ಕೊರೊನಾ ಪಾಸಿಟಿವ್ ಆಗಿದ್ದ ನಟ ಅಭಿಷೇಕ್ ಬಚ್ಚನ್ ಅವರ ಕೊರೊನಾ ವರದಿ ಬರೋಬ್ಬರಿ 29 ದಿನಗಳ ಬಳಿಕ ನೆಗೆಟಿವ್ ಆಗಿದೆ.
ಸುಮಾರು ಒಂದು ತಿಂಗಳ ಹಿಂದೆ ನಟ ಅಮಿತಾಬ್ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ, ಮೊಮ್ಮಗಳು ಆರಾಧ್ಯಗೆ ಕೊರೊನಾ ಪಾಸಿಟಿವ್ ಆಗಿದ್ದು ಅಭಿಷೇಕ್ ಹೊರತು ಪಡಿಸಿ ಮತ್ತೆಲ್ಲರಿಗೂ ಕೊರೊನಾ ವರದಿ ನೆಗೆಟಿವ್ ಬಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಇದೀಗ ಸುಮಾರು 29 ದಿನಗಳ ಬಳಿಕ ನಟ ಅಭಿಷೇಕ್ ಬಚ್ಚನ್ ಕೊರೊನಾ ವರದಿಯು ನೆಗೆಟಿವ್ ಆಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ವಾಗ್ದಾನವು ಭರವಸೆಯಾಗಿದೆ!. ಇಂದು ಮಧ್ಯಾಹ್ನ ನನ್ನ ಕೊರೊನಾ ವರದಿ ನೆಗೆಟಿವ್ ಆಗಿದೆ. ನಾನು ಕೊರೊನಾವನ್ನು ಸೋಲಿಸುತ್ತೇನೆ ಎಂದು ಹೇಳಿದ್ದೆ. ನಾನು ಹಾಗೂ ನನ್ನ ಕುಟುಂಬ ಗುಣಮುಖರಾಗುವಂತೆ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ನನ್ನ ಆರೈಕೆ ಮಾಡಿದ ನಾನಾವತಿ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್ ಸಿಬ್ಬಂದಿಗಳಿಗೆ ಕೃತಜ್ಞತೆಗಳು. ಧನ್ಯವಾದ ಎಂದು ತಿಳಿಸಿದ್ದಾರೆ.