ಮಡಿಕೇರಿ, ಆ 08(DaijiworldNews/HR): ಕೊಡಗು ಜಿಲ್ಲೆಯಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬೆಟ್ಟ ಕುಸಿತವಾಗಿದ್ದು ಈ ಸ್ಥಳದಲ್ಲಿ ಎನ್ಡಿಆರ್ಎಫ್ ಕಾರ್ಯಾಚರಣೆ ಆರಂಭಿಸಿದ್ದು ಇಂದು ಮಧ್ಯಾಹ್ನದ ವೇಳೆಗೆ ಒಂದು ಮೃತದೇಹ ಪತ್ತೆಯಾಗಿದೆ.
ಈ ಪ್ರದೇಶದಲ್ಲಿ ಪ್ರಧಾನ ಅರ್ಚಕರು ಹಾಗೂ ಅವರ ಕುಟುಂಭಸ್ಥರು ವಾಸಗಿದ್ದರು. ಇದೀಗ ಮೃತ ದೇಹವನ್ನು ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರ ಅಣ್ಣ ಆನಂದ ತೀರ್ಥ ಸ್ವಾಮಿ (86) ಅವರದ್ದು ಎಂದು ಗುರುತಿಸಲಾಗಿದೆ. ಇನ್ನೂ ಕಣ್ಮರೆಯಾದ ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಇದೀಗ ತಲಕಾವೇರಿ ಭಾಗದಲ್ಲಿ ಮಳೆಯ ಸ್ವಲ್ಪ ಕಡಿಮೆಯಾಗಿದ್ದು ಕುಸಿದ ಬೆಟ್ಟದ ಕೆಸರು ಮಣ್ಣಿನ ನಡುವೆ ಎನ್ಡಿಆರ್ಎಫ್ ಸಿಬ್ಬಂದಿ ಕಾರ್ಯಾಚರಣೆ ಮಾಡುತ್ತಿದ್ದಾರೆ.
ಇನ್ನು ಈ ಸ್ಥಳವು ಅತ್ಯಂತ ಅಪಾಯಕಾರಿಯಾಗಿದ್ದು ಹಗ್ಗದ ಮೂಲಕ ಭೂಕುಸಿತ ಸ್ಥಳದಲ್ಲಿ ರಕ್ಷಣಾ ಪಡೆಯ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.