ಬೆಂಗಳೂರು, ಆ. 09 (DaijiworldNews/MB) : ಕೇಂದ್ರ ಸರ್ಕಾರ ಅಖಿಲ ಭಾರತ ಕೈಮಗ್ಗ ಮಂಡಳಿಯನ್ನು ರದ್ದು ಮಾಡಿರುವುದರ ವಿರುದ್ದ ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಖಿಲ ಭಾರತ ಕೈಮಗ್ಗ ಮಂಡಳಿಯನ್ನು ರದ್ದುಪಡಿಸುವ ಮೂಲಕ ನರೇಂದ್ರ ಮೋದಿ ಅವರ 'ಆತ್ಮನಿರ್ಭರ'ದ ಮುಖವಾಡ ಕಳಚಿಬಿದ್ದಿದೆ. ನೀತಿ ನಿರೂಪಣೆ, ಕಾರ್ಯಕ್ರಮಗಳ ಮೇಲುಸ್ತುವಾರಿ ಮತ್ತು ಕುಂದುಕೊರತೆಗಳ ನಿವಾರಣೆಯ ಕೆಲಸ ಮಾಡುತ್ತಾ, ಕೇಂದ್ರ ಸರ್ಕಾರ ಮತ್ತು ನೇಕಾರರ ನಡುವೆ ಕೊಂಡಿಯಂತಿದ್ದ ಮಂಡಳಿ ರದ್ದತಿ ಖಂಡನೀಯ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ಜುಲೈ 27ರಂದು ಕೈಮಗ್ಗ ಮಂಡಳಿಯನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.