ಬೆಂಗಳೂರು, ಆ. 09 (DaijiworldNews/MB) : ಅಯೋಧ್ಯೆಯ ರಾಮ ಮಂದಿರವನ್ನು ರಮ್ ಮಂದಿರ್ ಎಂದು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳಕಾರಿಯಾಗಿ ಚಿತ್ರಗಳನ್ನು ಪ್ರಕಟಿಸಿದ ಆರೋಪದ ಮೇಲೆ ಯುವತಿಯೊಬ್ಬಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಈ ಬಗ್ಗೆ ನ್ಯಾಯವಾದಿ ಯೋಗೇಂದ್ರ ಹೊಡಗೊಟ್ಟ ಎಂಬುವವರು ದೂರು ನೀಡಿದ್ದು ಲೀಸಾ ಗಂಗೂಲಿ ಎಂಬ ಯುವತಿಯ ವಿರುದ್ದ ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಐಪಿಸಿ-1860 ಅಡಿ 153ಎ, 295 ಹಾಗೂ 295ಎ ಅಡಿ ಪ್ರಕರಣ ದಾಖಲಾಗಿದೆ.
ಲೀಸಾ ಗಂಗೂಲಿ ಅವರು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಧರ್ಮವನ್ನು ನಿಂದನೆ ಮಾಡಿ ಅವಹೇಳನಕಾರಿ ಪೋಸ್ಟ್ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯವಾದಿ ಯೋಗೇಂದ್ರ ಹೊಡಗೊಟ್ಟ ಅವರು ಒತ್ತಾಯಿಸಿದ್ದಾರೆ.