ನವದೆಹಲಿ, ಆ 09 (DaijiworldNews/PY): ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘಲಾಲ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿರುವ ಅರ್ಜುನ್ ರಾಮ್ ಅವರು ಕೊರೊನಾ ದೃಢಪಟ್ಟ ಬಗ್ಗೆ ಸ್ವತಃ ಟ್ವೀಟ್ನಲ್ಲಿ, ನನಗೆ ಕೊರೊನಾ ಲಕ್ಷಣಗಳು ಕಂಡುಬಂದಿದ್ದು, ನಾನು ಕೂಡಲೇ ಪರೀಕ್ಷೆ ಮಾಡಿಸಿಕೊಂಡಿದ್ದೇನೆ. ಮೊದಲು ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿತ್ತು. ಎರಡನೇ ಬಾರಿ ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ನಾನು ಆರೋಗ್ಯವಾಗಿದ್ದೇನೆ. ಆದರೆ, ವೈದ್ಯರ ಸಲಹೆಯ ಮೇರೆಗೆ ನಾನು ಏಮ್ಸ್ನಲ್ಲಿ ದಾಖಲಾಗಿದ್ದೇನೆ. ದಯವಿಟ್ಟು ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿದವರು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಮನವಿ ಮಾಡಿದ್ದಾರೆ.
ಅರ್ಜುನ್ ರಾಮ್ ಅವರು ಬಾಬಿಜಿ ಪಾಪಡ್ ಎನ್ನುವ ಹೊಸ ಬ್ರಾಂಡ್ನ ಪಾಪಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದರು. ಅಲ್ಲದೇ, ಈ ಪಾಪಡ್ ಕೊರೊನಾ ವಿರುದ್ದ ಹೋರಾಡುವ ಶಕ್ತಿ ಹೊಂದಿದೆ ಎಂದು ಹೇಳಿದ್ದರು. ಅಲ್ಲದೇ, ಬಾಬಿಜಿ ಪಾಪಡ್ ಎಂದು ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿತ್ತು.