ಬೆಂಗಳೂರು, ಆ 09 (DaijiworldNews/PY): ಕರ್ನಾಟಕದಲ್ಲಿ ಈಗ 100 ಕೊರೊನಾ ಸೋಂಕು ಪತ್ತೆ ಪ್ರಯೋಗಾಲಯಗಳಿವೆ. 45 ಸರ್ಕಾರಿ ಮತ್ತು 55 ಖಾಸಗಿ ಪ್ರಯೋಗಾಲಯಗಳಿದ್ದು, ರಾಜ್ಯದಾದ್ಯಂತ 16,68,511 ಪರೀಕ್ಷೆಗಳನ್ನು ನಡೆಸಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರ್ನಾಟಕದಲ್ಲಿ ಈಗ 100 ಕೊರೊನಾ ಸೋಂಕು ಪತ್ತೆ ಪ್ರಯೋಗಾಲಯಗಳಿವೆ. 45 ಸರ್ಕಾರಿ ಮತ್ತು 55 ಖಾಸಗಿ ಪ್ರಯೋಗಾಲಯಗಳಿದ್ದು, ರಾಜ್ಯದಾದ್ಯಂತ 16,68,511 ಪರೀಕ್ಷೆಗಳನ್ನು ನಡೆಸಿದ್ದೇವೆ. ಅದರಲ್ಲಿ 79.85% (13,32,464) ಪರೀಕ್ಷೆಗಳು ಆರ್ಟಿ-ಪಿಸಿಆರ್ ಮತ್ತು ಇತರ ವಿಧಾನ ಪರೀಕ್ಷೆಗಳು. ಉಳಿದಂತೆ 3,36,047 ರಾಪಿಡ್ ಆಂಟಿಜೆನ್ ಪರೀಕ್ಷೆಗಳು ಎಂದು ತಿಳಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ಮುಖ್ಯಮಂತ್ರಿ ಬಿಎಸ್ವೈ ಅವರು ಭರವಸೆ ನೀಡಿದಂತೆ ಕೊರೊನಾ ಮತ್ತು ಕೊರೊನೇತರ ರೋಗಿಗಳನ್ನು ಕೊರೊನಾ ಆರೈಕೆ ಕೇಂದ್ರಗಳಿಗೆ ಹಾಗೂ ಆಸ್ಪತ್ರೆಗಳಿಗೆ ಸಾಗಿಸಲು ಅನುಕೂಲವಾಗುವಂತೆ ಬೆಂಗಳೂರು ನಗರದಾದ್ಯಂತ 665 ಆಂಬುಲೆನ್ಸ್ಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.