ನವದೆಹಲಿ, ಆ 09(DaijiworldNews/HR): ಕೃಷಿ ಮೂಲಸೌಕರ್ಯ ನಿಧಿಯು 1 ಲಕ್ಷ ಕೋಟಿ ರೂ.ಗಳನ್ನು ಗ್ರಾಮಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ, ಜೊತೆಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ಹಣಕಾಸು ಸೌಲಭ್ಯ ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ಜಿಲ್ಲೆಯ ಪ್ರಸಿದ್ಧ ಉತ್ಪನ್ನಗಳನ್ನು ದೇಶ ಮತ್ತು ವಿಶ್ವದ ಮಾರುಕಟ್ಟೆಗೆ ಸ್ವಾವಲಂಬಿ ಭಾರತ ಅಭಿಯಾನದ ಅಡಿಯಲ್ಲಿ ತರಲು ದೊಡ್ಡ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಒಂದು ಲಕ್ಷ ಕೋಟಿ ರೂ.ಗಳ ವಿಶೇಷ ನಿಧಿಯನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಇದು ಹಳ್ಳಿಗಳಲ್ಲಿ ಉತ್ತಮ ಸಂಗ್ರಹಣೆ, ಆಧುನಿಕ ಕೋಲ್ಡ್ ಸ್ಟೋರೇಜ್ ಸರಪಳಿಗಳನ್ನು ರಚಿಸಲು ಸಹಾಯ ಮಾಡುತ್ತದೆ ಮತ್ತು ಗ್ರಾಮದಲ್ಲಿ ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತದೆ. ಇದು ಗ್ರಾಮದ ರೈತ ಗುಂಪುಗಳಿಗೆ ಕೂಡ ಸಹಾಯ ಮಾಡುತ್ತದೆ, ರೈತರು ಸಮಿತಿಗಳು, ಗೋದಾಮುಗಳನ್ನು ನಿರ್ಮಿಸಲು ಕೋಲ್ಡ್ ಸ್ಟೋರೇಜ್, ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಈ ನಿಧಿಯನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ಈ ಆಧುನಿಕ ಮೂಲಸೌಕರ್ಯವು ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸುವಲ್ಲಿ ಬಹಳ ದೂರ ಸಾಗಲಿದೆ. ಸ್ವಾವಲಂಬಿ ಭಾರತ ಅಭಿಯಾನದಡಿಯಲ್ಲಿ, ಪ್ರತಿ ಜಿಲ್ಲೆಯ ಪ್ರಸಿದ್ಧ ಉತ್ಪನ್ನಗಳನ್ನು ದೇಶದ ಮತ್ತು ವಿಶ್ವದ ಮಾರುಕಟ್ಟೆಗೆ ತರಲು ದೊಡ್ಡ ಯೋಜನೆಯನ್ನು ರೂಪಿಸಲಾಗಿದೆ" ಎಂದು ಹೇಳಿದರು.