ಮುಂಬೈ, ಆ. 09 (DaijiworldNews/MB) : ನಟಿ ನತಾಶಾ ಸೂರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಆಗಸ್ಟ್ ಮೊದಲ ವಾರದಿಂದಲೂ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ. ಆಗಸ್ಟ್ 1ರಂದು ನಾನು ಕೆಲಸದ ಕಾರಣ ಪುಣಗೆ ಹೋಗಿದ್ದೆ. ಅಲ್ಲಿ ಕೊರೊನಾ ಸೋಂಕು ತಗುಲಿರಬಹುದು. ಪ್ರಸ್ತುತ ನನ್ನ ಕಾರಣದಿಂದ ತಂಗಿ ರೂಪಾಲಿ ಹಾಗೂ ಅಜ್ಜಿಗೂ ಕೂಡಾ ಸೋಂಕು ಪಾಸಿಟಿವ್ ಆಗಿದೆ. ನಾನು ದೈಹಿಕವಾಗಿ ದಣಿದಿದ್ದೇನೆ. ನನ್ನ ಕುಟುಂಬದವರು ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಹಾಗೆಯೇ ನನ್ನ ಮುಂದಿನ ಚಿತ್ರ ಡೇಂಜರ್ಸ್ ಶೀಘ್ರದಲ್ಲೇ ರಿಲೀಸ್ ಆಗಲಿದ್ದು ಅದಕ್ಕೆ ಪ್ರೇಕ್ಷಕರು ನೀಡುವ ಪ್ರತಿಕ್ರಿಯೆಗೆ ಕಾತುರಳಾಗಿದ್ದೇನೆ ಎಂದು ಹೇಳಿದ್ದಾರೆ.
ಕೊರೊನಾ ಕಾರಣದಿಂದಾಗಿ ಭಾರತದಲ್ಲಿ ಥಿಯೇಟರ್ಗಳು ತೆರೆಯಲು ಅವಕಾಶವಿಲ್ಲದ ಹಿನ್ನೆಲೆ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.