ತಿರುವನಂತಪುರ, ಆ 09(DaijiworldNews/HR): ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ರಾಜನಲಾದ ಪೆಟ್ಟಿಮುಡಿಯಲ್ಲಿ ನಡೆದ ಭೀಕರ ಭೂಕುಸಿತದಲ್ಲಿ ಅವಶೇಷಗಳಡಿ ಸಿಲುಕಿದದ್ದವರಲ್ಲಿ ಇಂದು 16 ಶವಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 42 ಕ್ಕೆ ತಲುಪಿದೆ.
ಶುಕ್ರವಾರ ಭೂ ಕುಸಿತ ಸಂಭವಿಸಿದ್ದು, ಈ ಸ್ಥಳದಲ್ಲಿ 78 ಜನರು ತಂಗಿದ್ದರು, ಅದರಲ್ಲಿ 12 ಮಂದಿಯನ್ನು ರಕ್ಷಿಸಲಾಗಿದ್ದು, 42 ಶವಗಳು ಪತ್ತೆಯಾಗಿದ್ದು, ಉಳಿದವರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿ ತಮಿಳುನಾಡಿನ ಮೂಲದವರು ವಾಸಿಸುತ್ತಿದ್ದರು. ಈ ಸ್ಥಳ ಎತ್ತರದ ಗುಡ್ಡ ಪ್ರದೇಶವಾಗಿರುವುದರಿಂದ ಈ ಸ್ಥಳಗಳಲ್ಲಿ ಭೂ ಕುಸಿತ ಅಥವಾ ಗುಡ್ಡೆಗಳು ಜರೆಯುವುದು ಸರ್ವೇ ಸಾಮಾನ್ಯ ಆದರೆ ಇದೀಗ ಈ ಭೀಕರ ಘಟನೆ ಎಲ್ಲರನ್ನು ಭಯಭೀತಗೊಳಿಸಿದೆ.