ಮುಂಬೈ, ಆ 09 (DaijiworldNews/PY): 2006ರಲ್ಲಿ ಕಳೆದುಕೊಂಡ ತನ್ನ ಪರ್ಸ್ ಅನ್ನು ಸುಮಾರು 14 ವರ್ಷಗಳ ಬಳಿಕ ಮರಳಿ ಪಡೆದುಕೊಂಡ ಘಟನೆ ಮುಂಬೈಯಲ್ಲಿ ನಡೆದಿದೆ.
2006ರಲ್ಲಿ ಅವರು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಪನ್ವೆಲ್ ಎನ್ನುವ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ತಮ್ಮ ಪರ್ಸ್ ಕಳೆದುಕೊಂಡಿದ್ದರು ಎಂದು ಸರ್ಕಾರಿ ರೈಲ್ವೇ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಎಪ್ರಿಲ್ನಲ್ಲಿ ಹೇಮಂತ್ ಅವರಿಗೆ ಜಿ ಆರ್ಪಿ ವಾಶಿಯಿಂದ ಕರೆ ಬಂದಿದ್ದು, ನಿಮ್ಮ ಪರ್ಸ್ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದರು.
ನಾನು ಪರ್ಸ್ ಕಳೆದುಕೊಂಡ ಸಂದರ್ಭ ಅದರಲ್ಲಿ 900 ರೂ. ಇತ್ತು. 2016 ರೂಪಾಯಿ ಅಮೌಲ್ಯೀಕರಣವಾಗಿತ್ತು. ವಾಶಿಯ ಜಿಆರ್ಪಿ ನನಗೆ 300 ರೂ.ಅನ್ನು ಹಿಂದಿರುಗಿಸಿದೆ. ಅವರು ಸ್ಟಾಂಪ್ ಪೇಪರ್ ಕೆಲಸಕ್ಕಾಗಿ 100 ಕಡಿತಗೊಳಿಸಿದ್ದರು. ಉಳಿದ 500 ರೂ.ಅನ್ನು ಹಿಂದಿರುಗಿಸಲಾಗುವುದು ಎಂದು ಹೇಳಿದರು. ಸ್ಕ್ರ್ಯಾಪ್ ಮಾಡಿದ ನೋಟ್ ಅನ್ನು ಹೊಸದರೊಂದಿಗೆ ವಿನಿಮಯ ಮಾಡಿದ ಬಳಿಕ ನೀಡಲಾಗುವುದು ಎಂದು ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಕೊರೊನಾ ಲಾಕ್ಡೌನ್ ಇದ್ದ ಕಾರಣ ಅವರ ಪರ್ಸ್ ಅನ್ನು ಸಂಗ್ರಹಿಸಲು ಹೋಗಲು ಸಾಧ್ಯವಾಗಿಲ್ಲ. ಲಾಕ್ಡೌನ್ ಸಡಿಲಗೊಂಡ ಬಳಿಕ ಪರ್ಸ್ ಅನ್ನು ಪಡೆದು ಹೇಮಂತ್ ಅವರಿಗೆ ನೀಡಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.