ಮೈಸೂರು, ಆ. 10 (DaijiworldNews/MB) : ''ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಜನ ಪ್ರಿಯತೆ ಪಡೆಯಬೇಕಾದರೆ ಹಿಂದೂತ್ವವನ್ನು ಒಪ್ಪಿಕೊಳ್ಳಬೇಕು'' ಎಂದು ಕಾಂಗ್ರೆಸ್ ಪಕ್ಷದ ಮುಖಂಡ, ವಿಧಾನಪರಿಷತ್ ಸದಸ್ಯ ಆರ್ ಧರ್ಮಸೇನಾ ಹೇಳಿದ್ದಾರೆ.
ಕ್ವಿಟ್ ಇಂಡಿಯಾ ಚಳವಳಿಯ ವರ್ಷದ ಅಂಗವಾಗಿ ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ವರ್ಷಾಚರಣೆಯಲ್ಲಿ ಮಾತನಾಡಿದ ಅವರು, ''ಕಾಂಗ್ರೆಸ್ ಬದಲಾಗಬೇಕಿದೆ. ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಈಗೀನ ಕಾಲದಲ್ಲಿ ಜನಪ್ರಿಯತೆ ಗಳಿಸಬೇಕಾದರೆ ಹಿಂದೂತ್ವವನ್ನು ಒಪ್ಪಿಕೊಳ್ಳಬೇಕು'' ಎಂದು ಹೇಳಿದರು.
''ಕಾಂಗ್ರೆಸ್ ಹಿಂದೂಗಳ ಹಿತದೃಷ್ಟಿಯಿಂದ ಬಹಳಷ್ಟು ಕೊಡುಗೆ ನೀಡಿದೆ. ನಾವು ಮಾಜಿ ಮಾಜಿ ಕೇಂದ್ರ ಸಚಿವ ಬಾಬು ಜಗಜೀವನ ರಾಮ್ ಮತಾಂತರವಾಗುವುದನ್ನು ತಡೆದಿದ್ದೆವು. ಪಕ್ಷ ಹಿಂದೂಗಳ ಹಿತದೃಷ್ಟಿಗಾಗಿ ನೀಡಿರುವ ಕೊಡುಗೆ ನೆನಪಿಸಲು ಹಿಂದೂ ಕೋಶವೊಂದನ್ನು ಸ್ಥಾಪಿಸಬೇಕಾಗಿದೆ'' ಎಂದರು.
''ಹಾಗೆಯೇ ಪ್ರತಿ 10 ವರ್ಷಗಳಿಗೊಮ್ಮೆ ರಾಜಕೀಯ ಪರಿಸ್ಥಿತಿ ಬದಲಾವಣಿಯಾಗಲಿದ್ದು ಜನಸಂಘ ಮೊದಲಾದ ಕಾರಣದಿಂದ ಬಿಜೆಪಿ ಹೆಚ್ಚು ಪ್ರಬಲವಾಗಿದೆ. ಎಲ್ಲಾ ಪಕ್ಷಗಳಿಗೂ ಬದಲಾವಣೆ ಅನಿವಾರ್ಯ. ನಾವು ಕೂಡಾ ಬದಲಾವಣೆಯಾಗಬೇಕು'' ಎಂದು ಅಭಿಪ್ರಾಯಪಟ್ಟರು.