ಕೋಲ್ಕತಾ, ಆ. 10 (DaijiworldNews/MB) : ಅಯೋಧ್ಯೆ ರಾಮ ಮಂದಿ ಭೂಮಿ ಪೂಜೆಯಂದು ಭಾರತೀಯರಿಗೆ ಶುಭಾಷಯ ತಿಳಿಸಿದ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿಯವರ ಮಾಜಿ ಪತ್ನಿ ಹಸಿನ್ ಜಹಾನ್ ಅವರಿಗೆ ಜೀವ ಬೆದರಿಕೆ ಕರೆಗಳನ್ನು ಮಾಡಲಾಗಿದೆ.
ಈ ಬಗ್ಗೆ ಹಸಿನ್ ಅವರು ಪೊಲೀಸರಿಗೆ ದೂರು ನೀಡಿದ್ದು, ''ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತಿದೆ. ಜೀವ ಬೆದರಿಕೆ ಹಾಕಲಾಗುತ್ತಿದೆ'' ಎಂದು ಹೇಳಿದ್ದಾರೆ.
''ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆದ ರಾಮ ಮಂದಿರ ಭೂಮಿಪೂಜೆಯ ಹಿನ್ನೆಲೆಯಲ್ಲಿ ನಾನು ಹಿಂದೂ ಸಹೋದರ ಹಾಗೂ ಸಹೋದರಿಯರಿಗೆ ಶುಭಾಷಯ ತಿಳಿಸಿದ್ದೆ. ಈ ಕಾರಣ ಕೆಲವೊಂದು ಕೊಲಕು ಮನಸ್ಸಿನ ವ್ಯಕ್ತಿಗಳು ಕಿರುಕುಳ ನೀಡುತ್ತಿದ್ದಾರೆ. ಅವ್ಯಾಚ ಶಬ್ದಗಳಿಂದ ನಿಂದನೆ ಮಾಡುತ್ತಿರುವ ಅವರು, ಜೀವ ಬೆದರಿಕೆ ಮಾತ್ರವಲ್ಲದೇ ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆಸುವ ಬಗೆಯೂ ಬೆದರಿಕೆ ಹಾಕುತ್ತಿದ್ದಾರೆ'' ಎಂದು ಹೇಳಿದ್ದಾರೆ.
''ಇದರಿಂದಾಗಿ ನಾನು ಮಾನಸಿಕವಾಗಿ ತೊಂದರೆಗೆ ಒಳಗಾಗುವ ಸಾಧ್ಯತೆಯಿದೆ. ಮಗಳೊಂದಿಗೆ ಒಟ್ಟಿಂಯಾಗಿ ನಾನು ವಾಸವಾಗಿದ್ದು ಈ ಬೆದರಿಕೆಗಳು ನನಗೆ ಅಸುರಕ್ಷಿತ ಭಾವನೆಯನ್ನು ಹುಟ್ಟು ಹಾಕುತ್ತಿದ್ದು ದಯವಿಟ್ಟು ಸಹಾಯ ಮಾಡಿ. ಪ್ರತಿ ರಾತ್ರಿಯೂ ಭಯದಿಂದಲ್ಲೇ ಕಳೆಯುವಂತಾಗಿದೆ. ಹಾಗಾಗಿ ದಯವಿಟ್ಟು ನನಗೆ ಸಹಾಯ ಮಾಡಿ'' ಎಂದು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.