ಮುಂಬೈ, ಆ 10(DaijiworldNews/HR): ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆಯ ಎರಡನೇ ಮದುವೆ ಸುಶಾಂತ್ ಸಿಂಗ್ ಗೆ ಒಪ್ಪಿಗೆಯಾಗಿರಲಿಲ್ಲಎಂಬ ಹೇಳಿಕೆ ನೀಡಿರುವ ಶಿವಸೇನೆಯ ಸಂಸದ ಸಂಜಯ್ ರೌತ್ ಕ್ಷಮೆಯಾಚಿಸಬೇಕು ಎಂದು ಸುಶಾಂತ್ ಸಹೋದರ ನೀರಜ್ ಬಬ್ಲು ಹೇಳಿದ್ದಾರೆ.
ಸುಶಾಂತ್ ಅವರ ತಂದೆ ಎರಡನೇ ವಿವಾಹದ ಬಗ್ಗೆ ಸಂಜಯ್ ರೌತ್ ಹೇಳಿಕೊಂಡಿರುವುದು ಸಂಪೂರ್ಣವಾಗಿ ಸುಳ್ಳಾಗಿದ್ದು ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ನಮ್ಮ ಕುಟುಂಬ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಬಾಬ್ಲು ಎಚ್ಚರಿಕೆ ನೀಡಿದ್ದಾರೆ.
ಮೊದಲ ದಿನದಿಂದಲೂ ಈ ಪ್ರಕರಣದ ಸಿಬಿಐ ತನಿಖೆಯನ್ನು ವಿರೋಧಿಸುತ್ತಿದ್ದ ರೌತ್, ಸುಶಾಂತ್ ತನ್ನ ತಂದೆ ಕೆ.ಕೆ.ಸಿಂಗ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಸುಶಾಂತ್ ಸಾವಿನ ವಿಷಯದಲ್ಲಿ ರಾಜಕೀಯ ಪಿತೂರಿ ನಡೆಯುತ್ತಿದೆ ಇದರಿಂದ ಸತ್ಯ ಹೊರಬರುವುದಿಲ್ಲ ಎಂದು ಹೇಳಿದರು.