ನವದೆಹಲಿ, ಆ. 10 (DaijiworldNews/MB) : ಭಾರತದ ಹಾಕಿ ಆಟಗಾರ ಮನ್ದೀಪ್ ಸಿಂಗ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಈ ಬಗ್ಗೆ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ತಿಳಿಸಿದ್ದು, ಬೆಂಗಳೂರಿನಲ್ಲಿರುವ ಎಸ್ಎಐ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ನಲ್ಲಿರುವ ಇತರ 20 ಆಟಗಾರರೊಂದಿಗೆ ಮನ್ದೀಪ್ ಅವರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಈಗ ಪಾಸಿಟಿವ್ ಆಗಿದೆ. ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಅವರಿಗೆ ಇತರ ಐವರು ಸೋಂಕಿತ ಆಟಗಾರರೊಂದಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದೆ.
ಕಳೆದ ವಾರ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ಮತ್ತು ಇತರ ನಾಲ್ವರು ಆಟಗಾರರಿಗೆ ಕೊರೊನಾ ಸೋಂಕು ಪಾಸಿಟಿವ್ ಆಗಿತ್ತು.
ಆಗಸ್ಟ್ 20ರಿಂದ ಬೆಂಗಳೂರಿನ ಎಸ್ಎಐ ಕೇಂದ್ರದಲ್ಲಿ ರಾಷ್ಟ್ರೀಯ ಶಿಬಿರವು ಆರಂಭವಾಗಲಿದೆ.