ಚೆನ್ನೈ, ಆ 10(DaijiworldNews/HR): ಲೆಬನಾನ್ ರಾಜಧಾನಿ ಬೈರುತ್ ನಗರದ ಬಂದರು ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟ ಎಲ್ಲರನ್ನು ಭಯಭೀತರನ್ನಾಗಿಸಿತ್ತು. ಈ ಸ್ಫೋಟಕ್ಕೆ ಬಂದರಿನಲ್ಲಿ ಶೇಖರಿಸಿಟ್ಟ ಅಮೋನಿಯಂ ನೈಟ್ರೇಟ್ ಕಾರಣ ಎನ್ನುವ ವಿಚಾರ ತಿಳಿದು ಬಂದಿತ್ತು. ಇದೀಗ ಚೆನ್ನೈ ಬಂದರಿನಲ್ಲಿ ಸೀಜ್ ಮಾಡಲಾದ 697 ಟನ್ ಅಮೋನಿಯಂ ನೈಟ್ರೇಟ್ ಅನ್ನು ಹೈದರಾಬಾದ್ಗೆ ಶಿಫ್ಟ್ ಮಾಡಲಾಗಿದೆ.
2015ರಲ್ಲಿ ಚೆನ್ನೈ ಬಂದರಿಗೆ 697 ಟನ್ ಅಮೋನಿಯಂ ನೈಟ್ರೇಟ್ ಹಡಗಿನಲ್ಲಿ ತರಲಾಗಿತ್ತು. ಇದು ತಮಿಳುನಾಡು ಮೂಲದ ಕಂಪೆನಿಯೊಂದಕ್ಕೆ ಸೇರಿದ್ದಾಗಿತ್ತು. ಆದರೆ ಸೂಕ್ತ ಪರವಾನಗಿ ಇಲ್ಲದೆ ಅಮೋನಿಯಂ ನೈಟ್ರೇಟ್ ತಂದಿದ್ದರಿಂದ ಅದನ್ನು ಸೀಜ್ ಮಾಡಲಾಗಿತ್ತು.
ಇನ್ನು ಬೈರೂತ್ ಸ್ಫೋಟದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಇಲ್ಲಿ ಸಂಗ್ರಹಿಸಿದ್ದ ಅಮೋನಿಯಂ ನೈಟ್ರೇಟ್ ಅನ್ನು ಆನ್ಲೈನ್ ಮೂಲಕ ಹರಾಜು ಹಾಕಿದ್ದು ಇದನ್ನು ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ಖರೀದಿಸಿದ್ದಾರೆ. 12 ಕಂಟೇನರ್ ಮೂಲಕ ಇವುಗಳನ್ನು ಹೈದರಾಬಾದ್ಗೆ ರಫ್ತು ಮಾಡಲಾಗಿದೆ.
ಆಗಸ್ಟ್5 ರಂದು ಮಧ್ಯಾಹ್ನ ಸಂಭವಿಸಿರುವ ಈ ಭಾರೀ ಸ್ಟೋಟದಿಂದ ಸ್ಫೋಟದಿಂದಾಗೆ ಲೆಬೆನಾನ್ ರಾಜಧಾನಿ ಬೈರುತ್ ನಗರ ಸಂಪೂರ್ಣ ಛಿದ್ರವಾಗಿದ್ದು, ಘಟನೆಯಲ್ಲಿ 4 ಸಾವಿರ ಜನ ಗಾಯಗೊಂಡು ನೂರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.