ಅಹಮದಾಬಾದ್, ಆ 10 (DaijiworldNews/PY): ಇಬ್ಬರು ಸಹೋದರರು ರಾಖಿ ಕಟ್ಟಿಸಿಕೊಳ್ಳುವ ನೆಪದಲ್ಲಿ ಸಹೋದರಿಯ ಮನೆಗೆ ಬಂದು ಆಕೆಯನ್ನು ಹತ್ಯೆಗೈದು ಆಭರಣ ದೋಚಿದ ಘಟನೆ ಅಹಮದಾಬಾದ್ನ ಸರಿತಾ ರೆಸಿಡೆನ್ಸಿಯಲ್ಲಿ ನಡೆದಿದೆ.
ಆರೋಪಿಗಳನ್ನು ಸಾಜಿಜುಲ್ ಶೇಖ್ ಮತ್ತು ರೋಜೋಲಿ ಶೇಖ್ ಎಂದು ಗುರುತಿಸಲಾಗಿದ್ದು, ಮೃತ ಮಹಿಳೆಯನ್ನು ಸೌಕಿ ಅಲಿಯಾಸ್ ಮೀರಾ ರಾಮಸ್ವರೂಪ್ ಸಾಧು ಎನ್ನಲಾಗಿದೆ.
ಸಹೋದರರಾದ ರೋಜೋಲಿ ಹಾಗೂ ಸಾಜಿಜುಸಲ್ ಆಗಸ್ಟ್ 2ರಂದು ಪರಸ್ಪರ ಭೇಟಿಯಾಗಿದ್ದು, ಸಹೋದರಿ ಸೌಕಿ ಸಾಜಿಜುಲ್ ವಿಚ್ಛೇದನ ನೀಡಲು ಕಾರಣ ಎಂದು ಆರೋಪಿಸಿ ಆಕೆಯನ್ನು ಕೊಲ್ಲುವ ಸಂಚು ರೂಪಿಸಿದ್ದರು.
ಸಾಜಿಜುಲ್ ಶೇಖ್ ಮೊದಲು ವಿವಾಹ ಆಗದೇ ಇದ್ದ ಕಾರಣ ರೋಜೋಲಿ ಶೇಖ್ಗೆ ವಿವಾಹ ಆಗಲು ಸಾಧ್ಯವಿರಲಿಲ್ಲ. ಆದರೆ, ಸೌಕಿಯ ಮೊದಲ ಪತಿ ರಾಕೇಶ್ ನೇಪಾಳಿ ಸಾವಿನ ನಂತರ ಆಕೆ ರಾಮ್ಸ್ವರೂಪ್ ಸಾಧುವನ್ನು ವಿವಾಹವಾಗಿದ್ದಳು.
ತಾನು ವಿಚ್ಛೇದನ ನೀಡಲು ಸೌಕಿಯೇ ಕಾರಣ ಎಂದು ರಾಖಿ ಕಟ್ಟಿಸಿಕೊಳ್ಳುವ ನೆಪದಲ್ಲಿ ಇಬ್ಬರು ಸಹೋದರರು ಸಹೋದರಿಯ ಮನೆಗೆ ಹೋಗಿದ್ದಾರೆ. ನಂತರ ಸೌಕಿಯ ಕೈಯಿಂದ ರಾಖಿ ಕಟ್ಟಿಸಿಕೊಂಡು, ಆಕೆ ನೀಡಿದ ಚಹಾ ಕುಡಿದಿದ್ದಾರೆ. ಬಳಿಕ ಇಬ್ಬರೂ ಸಹೋದರರು ಆಕೆಯನ್ನು ಇರಿದು ಹತ್ಯೆಗೈದು ಸುಮಾರು 6 ಲಕ್ಷ.ರೂ ಬೆಲೆಬಾಳುವ ಚಿನ್ನಾಭರಣಗಳನ್ನು ದೋಚಿದ್ದಾರೆ. ಭಾನುವಾರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.