ಗುಲ್ಬರ್ಗ, ಆ 11 (DaijiworldNews/HR): ಕೊರೊನಾ ಸೋಂಕು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಭಾರಿಯ ಸಾರ್ವಜನಿಕ ಗಣೇಶೋತ್ಸವ ಆಚರಣೆಯನ್ನು ರಾಜ್ಯ ಸರ್ಕಾರ ನಿಷೇಧಿಸಿತ್ತು. ಇದೀಗ ಸರ್ಕಾರದ ವಿರುದ್ಧ ಗರಂ ಆದ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ , ಬಾರ್, ಮಾಲ್ ಗೆ ಅವಕಾಶ ನೀಡಿದ ಸರ್ಕಾರ ಗಣೇಶೋತ್ಸವ ನಿಷೇಧಗೊಳಿಸಿದ್ರು ಆಚರಿಸಿಯೇ ಸಿದ್ದ ಎಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬಾರ್, ಮಾಲ್ ಗಳನ್ನು ತೆರೆಯಲು ಅವಕಾಶ ನೀಡುತ್ತದೆ. ಆದರೆ ಸಾರ್ವಜನಿಕ ಗಣೇಶೋತ್ಸವಕ್ಕೆ ಮಾತ್ರ ಅವಕಾಶ ನೀಡಿಲ್ಲ ಹಾಗಾಗಿ ನಾವು ಆಗಸ್ಟ್ 22ರಂದು ಆರಂಭವಾಗುವ ಸಾರ್ವಜನಿಕ ಗಣೇಶೋತ್ಸವವನ್ನು ಸರ್ಕಾರ ಅವಕಾಶ ನೀಡದಿದ್ದರೂ ಆಚರಣೆ ಮಾಡಿಯೇ ತೀರುತ್ತೇವೆ ಎಂದು ತಿಳಿಸಿದರು.
ಈ ಕೂಡಲೇ ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಬೇಕು. ಬೇಕಾಗಿದ್ದರೆ ನಮ್ಮನ್ನು ಬಂಧಿಸಬಹುದು ಆದರೆ ನಾವು ಕೊರೊನಾ ನಿಯಮಗಳ ಅಡಿಯೇ ನಾವು ಗಣೇಶೋತ್ಸವ ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ಕೊರೊನಾ ದೂರವಾಗಿ ಜನರಿಗೆ ನೆಮ್ಮದಿ ಬರಲಿ ಎಂದು ದತ್ತ ದೇವಸ್ಥಾನದ ಶಿವಾನಂದ ಮಠದಲ್ಲಿ ರಾಮಕೋಟಿ ಜಪಯಜ್ಞ ನೆರವೇರಿಸಿದರು.