ಕುಪ್ವಾರ, ಆ. 11 (DaijiworldNews/MB) : ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿನ ಲೋಲಬ್ನ ಲಾಲ್ಪೊರಾದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಅಡಗು ತಾಣಕ್ಕೆ ದಾಳಿ ನಡೆಸಿದ್ದು ಓರ್ವ ಉಗ್ರ ಸೇರಿದಂತೆ ನಾಲ್ವರು ಸಹಚರರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಪರ್ವೈಜ್ ಅಹ್ಮದ್ ಭಟ್ (22), ಅಲ್ತಾಫ್ ಅಹ್ಮದ್ ಮಿರ್ (35), ಘ್ ಮೊಹಮ್ಮದ್ (35), ನಜೀಮುದ್ದೀನ್ ಗುಜ್ಜರ್ (44), ಮತ್ತು ಅಬ್ದುಲ್ ಕ್ವಾಯೂಮ್ (29) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಸೋಮವಾರ ಸಂಜೆಯಿಂದ ಭದ್ರತಾ ಪಡೆಗಳು ಹಾಗೂ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು ನಾಲ್ವರು ಉಗ್ರರನ್ನು ಬಂಧಿಸಿ ಸ್ಥಳದಲ್ಲಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಉಗ್ರರಿಗೆ ಆರ್ಥಿಕ ನೆರವು ಒದಗಿಸುತ್ತಿದ್ದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಅಡಗು ತಾಣಗಳ ಮೇಲೆ ದಾಳಿ ನಡೆಸಿದ್ದ ಭದ್ರತಾಪಡೆಗಳು 6 ಮಂದಿಯನ್ನು ಬಂಧಿಸಿತ್ತು.