ಜಮ್ಮು-ಕಾಶ್ಮೀರ, ಆ 12 (DaijiworldNews/PY): ಪುಲ್ವಾಮ ಜಿಲ್ಲೆಯ ಕಾಮ್ರಾಝಿಫೋರಾ ಗ್ರಾಮದಲ್ಲಿ ಬುಧವಾರ ಮುಂಜಾನೆ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯ ಸಂದರ್ಭ ಓರ್ವ ಯೋಧ ಗಂಭೀರ ಗಾಯಗೊಂಡಿದ್ದು, ಮತ್ತೋರ್ವ ಯೋಧ ಹುತಾತ್ಮರಾಗಿದ್ದಾರೆ.
ಸುಮಾರು 2.30ರ ವೇಳೆಗೆ ಪುಲ್ವಾಮ ಜಿಲ್ಲೆಯ ಕಾಮ್ರಾಝಿಫೋರಾ ಗ್ರಾಮದಲ್ಲಿ ಉಗ್ರರ ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ಸಂದರ್ಭ ಭದ್ರತಾ ಪಡೆಗಳು ಓರ್ವ ಉಗ್ರರನ್ನು ಎನ್ಕೌಂಟರ್ ಮೂಲಕ ಸದೆಬಡೆದಿದ್ದಾರೆ. ಗುಂಡಿನ ಚಕಮಕಿಯ ಸಂದರ್ಭ ಇಬ್ಬರು ಯೋಧರಿಗೂ ಕೂಡಾ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಓರ್ವ ಸೈನಿಕನ ಶ್ರೀನಗರದ ಶ್ರೀನಗರದ 92 ಬೇಸ್ ಆರ್ಮಿ ಆಸ್ಪತ್ರೆಯಲ್ಲಿ ಹುತಾತ್ಮರಾಗಿದ್ದಾರೆ.
ಶೋಧಾ ಕಾರ್ಯ ಮುಂದುವರೆದಿದೆ. ಭಾರತೀಯ ಸೇನಾ ಪಡೆ ಸೇರಿದಂತೆ ಜಮ್ಮು-ಕಾಶ್ಮೀರ ಪೊಲೀಸರು, ಸಿಆರ್ಪಿಎಫ್ ಯೋಧರು ಮಂಗಳವಾರ ಸಂಜೆಯಿಂದಲೇ ಜಂಟಿ ಕಾರ್ಯಾಚರಣೆ ನಡೆಸಿದ್ದರು.
ದಾಳಿ ನಡೆದ ಸ್ಥಳದಲ್ಲಿ ಪತ್ತೆಯಾದ ಏಕೆ47 ರೈಫಲ್, ಗ್ರೆನೇಡ್ಸ್ ಹಾಗೂಇತರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ.