ನವದೆಹಲಿ, ಆ. 12 (DaijiworldNews/MB) : ಪೂರ್ವ ಲಡಾಕ್ನಲ್ಲಿ ದೀರ್ಘ ಸಂಘರ್ಷಕ್ಕೆ ಭಾರತ ಸಿದ್ದವಾಗಿದೆ ಎಂದು ರಕ್ಷಣಾ ಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರು ಹೇಳಿದ್ದಾರೆ.
ಮಂಗಳವಾರ ಗಡಿಯಲ್ಲಿನ ಇಂದಿನ ಪರಿಸ್ಥಿತಿ ಬಗ್ಗೆ ದೇಶದ ಅರೆಸೇನಾಪಡೆ ತಂಡಕ್ಕೆ ತಿಳಿಸಿದ ಅವರು, ''ಚೀನಾವು ಪೂರ್ವ ಲಡಾಕ್ನ ಗಡಿ ವಾಸ್ತವ ರೇಖೆಯಲ್ಲಿ ಘರ್ಷಣೆಯನ್ನು ಮುಂದುವರಿಸುವ ಯತ್ನವನ್ನು ಮಾಡುತ್ತಿದೆ. ಭಾರತವು ದೀರ್ಘಾವಧಿಯ ಸಂಘರ್ಷವನ್ನು ಎದುರಿಸಲು ಸಿದ್ದವಾಗಿದೆ'' ಎಂದು ಹೇಳಿದ್ದಾರೆ.
''ಚೀನಾದೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ತನ್ನ ಬೇಡಿಕೆ ಈಡೇರದ ಕಾರಣ ಈ ಕೂಡಲೇ ತನ್ನ ಸೇನೆಯನ್ನು ಚೀನಾ ಹಿಂದೆಗೆಯುವ ಸಾಧ್ಯತೆ ಇಲ್ಲ. ಚೀನಾ ಅವಕಾಶಕ್ಕಾಗಿ ಕಾಯುತ್ತಿರುವ ಕಾರಣ ಸೈನ್ಯ ವಾಪಾಸ್ ತೆಗೆದುಕೊಳ್ಳುವ ಪ್ರಕ್ರಿಯೆ ಇನ್ನಷ್ಟು ಮುಂದೆ ಸಾಗಬಹುದು'' ಎಂದು ಕೂಡಾ ತಿಳಿಸಿದ್ದಾರೆ.