ನವದೆಹಲಿ, ಆ 12 (DaijiworldNews/PY): ರಕ್ಷಣಾ ಖರೀದಿ ಮಂಡಳಿಯು, ಆತ್ಮನಿರ್ಭರ ಭಾರತದ ನಿರ್ಮಾಣದ ಸಲುವಾಗಿ ಸುಮಾರು 8,722.38 ಕೋಟಿ ರೂ.ಗಳ ರಕ್ಷಣಾ ಸಾಮಗ್ರಿಗಳ ಖರೀದಿ ಪ್ರಸ್ತಾಪಕ್ಕೆ ಅನುಮತಿ ನೀಡಿದೆ.
ರಕ್ಷಣಾ ಸಾಮಾಗ್ರಿಗಳ ಖರೀದಿ ಪ್ರಸ್ತಾಪಕ್ಕೆ ಅನುಮತಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ತೀಮಾನ ತೆಗೆದುಕೊಳ್ಳಲಾಗಿದೆ.
ಪ್ರಸ್ತಾವನೆಯಂತೆ, ಸರಕಾರಿ ಸ್ವಾಮ್ಯದ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ನಿಂದ ಭಾರತೀಯ ವಾಯುಪಡೆಗೆ ಅವಶ್ಯವಿರುವಂತ 106 ತರಬೇತಿ ವಿಮಾನಗಳನ್ನು ಖರೀದಿ ಮಾಡಲಾಗುತ್ತದೆ. ಬಿಎಚ್ಇಎಲ್ನಿಂದ ಸೂಪರ್ ರ್ಯಾಪಿಡ್ ಗನ್ ಮೌಂಟ್ನ ಮೇಲ್ದರ್ಜೆಗೇರಿಸಿದ ಆವೃತ್ತಿಯನ್ನು ಖರೀದಿ ಮಾಡಲು ತೀರ್ಮಾನ ಮಾಡಿದೆ.
ಈ ಪೈಕಿ ಕೆಲವೊಂದು ರಕ್ಷಣಾ ಸಾಮಾಗ್ರಗಳನ್ನು ಭಾರತೀಯ ಪಿಎಸ್ಯುಗಳಿಂದ ಖರೀದಿಸಲು ತೀರ್ಮಾನಿಸಿದೆ. ಭಾರತೀಯ ಸೇನೆ ಅವಶ್ಯಕವಾಗಿರುವಂತ 125 ಆರ್ಮರ್ ಪಿಯ ರ್ಸಿಂಗ್ ಫಿನ್ ಸ್ಟೆಬಿಲೈಸ್ಡ್ ಡಿಸ್ಕಾರ್ಡಿಂಗ್ ಸ್ಯಾಬೋಟ್ ಅನ್ನು ಖರೀದಿ ಮಾಡಲು ಅನುಮತಿ ನೀಡಿದೆ.
ರಕ್ಷಣಾ ಉತ್ಪಾದನೆ ಸಂಬಂಧಿಸಿದಂತೆ ಭಾರತವು ಸ್ವಾವಲಂಬನೆಯತ್ತ ಸಾಗುವು ಉದ್ದೇಶ ಹೊಂದಿದ್ದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.