ನವದಹೆಲಿ, ಆ. 12 (DaijiworldNews/MB) : ಗಡಿ ವಿಚಾರದಲ್ಲಿ ಭಾರತದೊಂದಿಗೆ ತಕರಾರು ಮಾಡುತ್ತಿರುವ ಚೀನಾಕ್ಕೆ ಭಾರತ ಆರ್ಥಿಕ ದಾಳಿ ನಡೆಸುತ್ತಿದ್ದು ಇದೀಗ ಭಾರತದಲ್ಲಿ ನಕಲಿ(ಸಂಶಯಾಸ್ಪದ) ಕಂಪನಿಗಳನ್ನು ಮಾಡಿಕೊಂಡು ಸಾವಿರಾರು ಕೋಟಿ ಹಣ ದುರುಪಯೋಗ ಮಾಡುತ್ತಿದ್ದ ಚೀನಾ ವ್ಯಕ್ತಿಗಳು ಹಾಗೂ ಅವರ ಸ್ಥಳೀಯ ಸಹವರ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಈ ಬಗ್ಗೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ಸ್ ಪ್ರಕಟಣೆ ಹೊರಡಿಸಿದ್ದು, ದೇಶದಲ್ಲಿರುವ ಚೀನಿಯರ ಬಗ್ಗೆ ಮಾಹಿತಿ ಪಡೆದು ಶೋಧ ಕಾರ್ಯ ನಡೆಸಲಾಗಿದೆ. ದೆಹಲಿ, ಗುರ್ಗಾಂವ್ ಮತ್ತು ಗಾಜಿಯಾಬಾದ್ನಲ್ಲಿ ಚೀನಿಯರು ನಡೆಸುತ್ತಿದ್ದ ಸುಮಾರು 12 ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಿದ್ದು ಈ ಪೈಕಿ ಕೆಲವರು ಭಾರತೀಯ ಸಹವರ್ತಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ಕೂಡಾ ಇದ್ದಾರೆ. ಇಂತಹ ನಕಲಿ ಕಂಪೆನಿಗಳು ಹಣ ದುರುಪಯೋಗ ಹಾಗೂ ಹವಾಲಾ ವಹಿವಾಟು ನಡೆಸುವಲ್ಲಿ ಭಾರತೀಯ ಸಹವರ್ತಿಗಳು ಕೂಡಾ ಶಾಮೀಲಾಗಿದ್ದಾರೆ ಎಂದು ತಿಳಿಸಿದೆ.
ಭಾರತದ ನಕಲಿ ಪಾಸ್ಪೋರ್ಟ್ ಹೊಂದಿರುವ ಚೀನಾದ ಕೆಲವು ಪ್ರಜೆಗೆಳು ಹಾಗೂ ಚೀನಾದ ಓರ್ವ ವ್ಯಕ್ತಿ ಇದರ ಕಿಂಗ್ ಪಿನ್ ಎಂದು ಆರೋಪ ಮಾಡಲಾಗಿದೆ. ಆತನ ಹೇಳಿಕೆ ಪ್ರಕಾರವಾಗಿ, ಮಣಿಪುರದಲ್ಲಿ ಈತನಿಗೆ ಭಾರತದ ನಕಲಿ ಪಾಸ್ಪೋರ್ಟ್ ಮಾಡಿ ಕೊಡಲಾಗಿದೆ ಎಂದು ಆತ ಹೇಳಿಕೆ ನೀಡಿದ್ದಾನೆ.
ಈ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದು ಶೋಧ ಕಾರ್ಯ ಮುಂದುವರಿಸಲಾಗುತ್ತಿದೆ ಎಂದು ವರದಿಯಾಗಿದೆ.