ನವದೆಹಲಿ, ಆ 12 (DaijiworldNews/PY): ಕೊರೊನಾ ವೈರಸ್ ಹಿನ್ನಲೆ ದೇಶದ ಜಿಡಿಪಿ ಬೆಳವಣಿಗೆಯು ಸ್ವಾತಂತ್ರ್ಯದ ನಂತರದ ಕನಿಷ್ಠ ಮಟ್ಟಕ್ಕೆ ಇಳಿಯುತ್ತದೆ ಎನ್ನುವ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಎಚ್ಚರಿಕೆಯ ಹೇಳಿಕೆಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
2019ರ ಚುನಾವಣಾ ಪ್ರಚಾರ ಘೋಷಣೆಯನ್ನು ಬಳಸಿಕೊಂಡು ರಾಹುಲ್ ಗಾಂಧಿ, ಮೋದಿ ಹೈ ತೋ ಮಮ್ಕಿನ್ ಹೈ (ಮೋದಿ ಇದ್ದರೆ ಎಲ್ಲವೂ ಸಾಧ್ಯ) ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮೊದಲು, ಮೂರ್ತಿ 1947ರಿಂದ ದೇಶದ ಜಿಡಿಪಿಯು ಅತ್ಯಂತ ಕಡಿಮೆ ಮಟ್ಟವನ್ನು ಮುಟ್ಟುವ ವಿಚಾರವನ್ನು ತಿಳಿಸಿದ್ದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಾರಾಯಣ ಮೂರ್ತಿ ಅವರು, ಭಾರತದ ಜಿಡಿಪಿ ಕನಿಷ್ಠ ಐದು ಪ್ರತಿಶತದಷ್ಟು ಕುಗ್ಗುವ ನಿರೀಕ್ಷೆಯಿದೆ. 1947ರಿಂದ ಸ್ವಾತಂತ್ರ್ಯದ ನಂತರ ನಾವು ಅತ್ಯಂತ ಕಡಿಮೆ ಜಿಡಿಪಿಯನ್ನು ತಲುಪಬಹುದು ಎಂಬ ಭಯವಿದೆ ಎಂದಿದ್ದರು.