ಬೆಂಗಳೂರು, ಆ 13 (DaijiworldNews/PY): ಕೆ.ಜಿ ಹಳ್ಳಿ ಗಲಭೆಯ ಸಂಬಂಧ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ನವೀನ್ ಫೇಸ್ಬುಕ್ ಖಾತೆಯಿಂದ ಕಳೆದ 15 ಗಂಟೆಗಳ ಹಿಂದೆ ಮತ್ತೊಂದು ಪೋಸ್ಟ್ ಶೇರ್ ಆಗಿರುವುದು ಸಂಶಯಕ್ಕೆ ಕಾರಣವಾಗಿದೆ.
ನವೀನ್ ಎಂಬಾತನು ವಿವಾದಾತ್ಮಕ ಪೋಸ್ಟ್ ಹಾಕಿದ್ದ ಆರೋಪದ ಹಿನ್ನೆಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ನವೀನ್ ಕಳೆದ 30 ಗಂಟೆಗಳಿಂದ ಪೊಲೀಸರ ವಶದಲ್ಲಿದ್ದಾನೆ. ಅಲ್ಲದೇ, ಆರೋಪಿ ಮೊನ್ನೆಯಿಂದ ತನ್ನ ಮೊಬೈಲ್ ಕಾಣೆಯಾಗಿರುವುದಾಗಿ ಪೊಲೀಸರಿಗೆ ಹೇಳುತ್ತಿದ್ದಾನೆ. ಆದರೆ, ಆತನ ಫೇಸ್ಬುಕ್ ಖಾತೆಯಿಂದ ಕಳೆದ 15 ಗಂಟೆಗಳ ಹಿಂದೆ ಪೋಸ್ಟ್ ಶೇರ್ ಆಗಿರುವ ಬಗ್ಗೆ ಎಲ್ಲರಲ್ಲೂ ಸಂಶಯ ವ್ಯಕ್ತವಾಗಿದೆ.
ಆರೋಪಿ ನವೀನ್ನನ್ನು ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜಪಡಿಸಿದ್ದಾರೆ. ಅರೋಪಿಯನ್ನು ಹೆಚ್ಚು ತನಿಖೆ ಮಾಡುವ ಅವಶ್ಯಕತೆ ಇದ್ದು, ಆತನನ್ನು ಪೊಲೀಸರು ಐದು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.