ನವದೆಹಲಿ, ಆ 13 (DaijiworldNews/PY): ಮಾರ್ಚ್ 11ರಿಂದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಸಂಸ್ಥೆಗಳಿಗೆ 3.04 ಕೋಟಿಗೂ ಹೆಚ್ಚು ಎನ್95 ಮಾಸ್ಕ್, 1.28 ಕೋಟಿ ಪಿಪಿಇ ಕಿಟ್ಗಳು, 10.83 ಕೋಟಿ ಎಚ್.ಸಿಕ್ಯೂ ಮಾತ್ರೆಗಳನ್ನು ಸರ್ಕಾರ ವಿತರಿಸಿದೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಇದಲ್ಲದೇ, 22,553 ಮೇಕ್ ಇನ್ ಇಂಡಿಯಾ ವೆಂಟಿಲೇಟರ್ಗಳನ್ನು ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಸಂಸ್ಥೆಗಳಿಗೆ ತಲುಪಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕೊರೊನಾ ಸಾಂಕ್ರಾಮಿಕದ ವಿರುದ್ದ ಹೋರಾಡಲು ಹಾಗೂ ಅದರ ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಮೂಲ ಸೌಕರ್ಯವನ್ನು ಬಲಪಡಿಸುಲ್ಲಿ ಕೇಂದ್ರ ಸರ್ಕಾರದ ಪಾತ್ರವಿದೆ ಎಂದು ಸಚಿವಾಲಯ ಒತ್ತಿಹೇಳಿದೆ.
ಪಿಪಿಇ ಕಿಟ್ಗಳು, ಎನ್95 ಮಾಸ್ಕ್ಗಳು, ವೆಂಟಿಲೇಟರ್ಗಳು ಮುಂತಾದ ಅಗತ್ಯವಾದ ವೈದ್ಯಕೀಯ ಉಪಕರಣಗಳನ್ನು ತಯಾರಿಸಿ ಸರಬರಾಜು ಮಾಡಬೇಕು. ಆತ್ಮ ನಿರ್ಭರ್ ಭಾರತ್ ಹಾಗೂ ಮೇಕ್ ಇನ್ ಇಂಡಿಯಾ ಕಲ್ಪನೆಗಾಗಿ ಹೆಚ್ಚಿನ ಉತ್ತೇಜನ ನೀಡಲಾಗಿದ್ದು, ಕೇಂದ್ರ ಸರ್ಕಾರ ವಿತರಿಸುವಂತ ಹೆಚ್ಚಿನ ಉತ್ಪನ್ನಗಳು ದೇಶೀಯವಾಗಿ ಉತ್ಪಾದಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.