ಬೆಂಗಳೂರು, ಆ 14 (DaijiworldNews/PY): ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಗುರುವಾರ ತಡರಾತ್ರಿ ಕಾರ್ಪೋರೇಟರ್ ಇರ್ಷಾದ್ ಬೇಗಂ ಪತಿ ಕಲೀಲ್ ಪಾಷ ಎಂಬಾತನನ್ನು ಬಂಧಿಸಿದ್ದಾರೆ.
ಇರ್ಷಾದ್ ಬೇಗಂ ಬಿಬಿಎಂಪಿ ಪಾಲಿಕೆಯ ಸದಸ್ಯೆಯಾಗಿದ್ದು, ಈಕೆಯ ಪತಿ ಆರೋಪಿ ಕಲೀಲ್ ಪಾಷ ಗಲಾಟೆ ಆರಂಭವಾಗುವ ಮುನ್ನವೇ ಪೊಲೀಸ್ ಠಾಣೆಗೆ ಬಂದಿದ್ದ. ಅಲ್ಲದೇ ಆತ ಎಲ್ಲರನ್ನೂ ಪ್ರಚೋದಿಸಿದ್ದ. ಇನ್ನೇನು ಗಲಾಟೆ ಆರಂಭವಾಗುತ್ತಿದೆ ಎನ್ನುವ ಸಂದರ್ಭ ಆತ ಪರಾರಿಯಾಗಿದ್ದ ಎನ್ನಲಾಗಿದೆ.
ಗಲಾಟೆಯ ನಡೆದ ನಂತರ ಪೊಲೀಸ್ ಠಾಣೆಯ ಬಳಿ ಬಂದ ಆತ ಪೊಲೀಸರಿಗೆ ಸಹಾಯ ಮಾಡುವಂತೆ ನಟನೆ ಮಾಡಿದ್ದ. ಗಲಭೆಯ ಬಗ್ಗೆ ತನಿಖೆ ನಡೆಸಿದ್ದ ಸಂದರ್ಭ ಘಟನೆಯಲ್ಲಿ ಕಲೀಂನ ಪಾತ್ರ ಕಂಡು ಬಂದ ಹಿನ್ನೆಲೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.