ಜೈಪುರ, ಆ 14 (DaijiworldNews/PY): ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಶುಕ್ರವಾರ ರಾಜಸ್ಥಾನದ ವಿಧಾನಸಭೆಯಲ್ಲಿ ವಿಶ್ವಾಸಾರ್ಹ ಮತವನ್ನು ಗೆದ್ದಿದ್ದು, ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ರಾಜಸ್ಥಾನ ವಿಧಾನಸಭೆಯ ವಿಶೇಷ ಅಧಿವೇಶನ ಇಂದು ಪ್ರಾರಂಭವಾಗಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಶ್ವಾಸಾರ್ಹ ನಿರ್ಣಯ ಮಂಡಿಸಿತು.
ವಿಶ್ವಾಸಾರ್ಹ ಮತಕ್ಕಾಗಿ ಕಾಂಗ್ರೆಸ್ ನಡೆಸಿದ ನಿರ್ಣಯದ ಕುರಿತು ರಾಜಸ್ಥಾನ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ವಿಶ್ವಾಸಾರ್ಹ ಮತದ ಪ್ರಸ್ತಾಪವನ್ನು ಮಂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಕುಮಾರ್ ಧರಿವಾಲ್, ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದರು. ಗೋವಾ ಅಥವಾ ಮಧ್ಯಪ್ರದೇಶದಲ್ಲಿ ನಡೆದಂತೆ ಇಲ್ಲಿ ನಡೆಯಲು ನಾವು ಅನುಮತಿ ನೀಡುವುದಿಲ್ಲ. ಕೇಂದ್ರ ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದೂ ಅಲ್ಲದೇ, ಸರ್ಕಾರವನ್ನು ಉರುಳಿಸಲು ತಯಾರಾಗಿತ್ತು. ಆದರೆ, ಇದರಲ್ಲಿ ಬಿಜೆಪಿ ಯಶಸ್ಸು ಕಾಣಲಿಲ್ಲ ಎಂದಿದ್ದಾರೆ.
ಆಡಳಿತ ರೂಢ ಪಕ್ಷ : ಕಾಂಗ್ರೆಸ್ 107, ಆರ್ಎಲ್ಡಿ 1, ಸ್ವತಂತ್ರರು 13, ಬಿಟಿಪಿ 2, ಎಡಪಕ್ಷ 2
ವಿರೋಧ ಪಕ್ಷ: ಬಿಜೆಪಿ 72, ಆರ್ಎಲ್ಪಿ 3 ಮತ ಪಡೆದುಕೊಂಡಿದೆ.