ನವದೆಹಲಿ, ಆ 14 (DaijiworldNews/PY): ಕೇಂದ್ರದ ರಾಜ್ಯ ಖಾತೆ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರಿಗೂ ಕೊರೊನಾ ದೃಢಪಟ್ಟಿದೆ.
ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಅವರು, ನಾನು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಸೋಂಕು ಇರುವುದು ದೃಢಪಟ್ಟಿದೆ. ರೋಗ ಲಕ್ಷಣಗಳು ಕಾಣಿಸದ ಕಾರಣ ನನಗೆ ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದೆ. ಯಾರೂ ಚಿಂತಿಸುವ ಅಗತ್ಯವಿಲ್ಲ ಎಂದಿದ್ದಾರೆ.
ನನಗೆ ಕೊರೊನಾ ದೃಢಪಟ್ಟ ಕಾರಣ ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ಮುಂಜಾಗ್ರತೆ ವಹಿಸಿ ಎಂದು ಹೇಳಿದ್ದಾರೆ.