ಮಡಿಕೇರಿ, ಆ 15(DaijiworldNews/HR): ಇತ್ತಿಚೆಗೆ ಬ್ರಹ್ಮಗಿರಿ ಬೆಟ್ಟ ಕುಸಿತಗೊಂಡು ಮಣ್ಣು ಪಾಲಾಗಿದ್ದ ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಕುಟುಂಬದ ಮತ್ತೊಬ್ಬ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಆ.6ರಂದು ಇಲ್ಲಿನ ಬ್ರಹ್ಮಗಿರಿ ಬೆಟ್ಟ ಕುಸಿದು ಪ್ರಧಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಐವರು ಮಣ್ಣಿನಡಿ ಬಿದ್ದು ನಾಪತ್ತೆಯಾಗಿದ್ದರು. ಇವರ ಪೈಕಿ ಆನಂದ ತೀರ್ಥ ಅವರ ಮೃತದೇಹ ಆ.8ರಂದು ಪತ್ತೆಯಾಗಿದ್ದು ಬಳಿಕ ಕಾರ್ಯಚರಣೆಯಲ್ಲಿ ಆ.11ರಂದು ನಾರಾಯಣ ಆಚಾರ್ ಅವರ ಮೃತದೇಹ ಪತ್ತೆಯಾಗಿತ್ತು.
ಸತತ 10 ದಿನಗಳ ಹುಡುಕಾಟ ನಡೆಯುತ್ತಿದ್ದು, ಮೂರು ದೇಹಗಳು ಪತ್ತೆಯಾಗಿದ್ದು. ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಚುರುಕುಗೊಂಡಿದೆ.
ಮೃತದೇಹದ ಲಿಂಗ ಗುರುತಿಸಲಾಗದಷ್ಟು ಕೊಳೆತಿದ್ದು,ಮಾಹಿತಿ ತಿಳಿದ ತಕ್ಷಣ ಸಚಿವ ಸೋಮಣ್ಣ ಮತ್ತು ಸಂಸದ ಪ್ರತಾಪ ಸಿಂಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.