ಭೋಪಾಲ್, ಆ 15(DaijiworldNews/HR): ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 'ರಾಮಾಯಣ ಸರ್ಕ್ಯೂಟ್' ಮತ್ತು 'ರಾಮ ವನಗಮನ' ಪಥವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
74ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿದಾಗ ಅದರೊಂದಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ. ಜೊತೆಗೆ ಅಮರಕಂಟಕ್ ಸರ್ಕ್ಯೂಟ್', 'ತೀರ್ಥಂಕರ ಸರ್ಕ್ಯೂಟ್', 'ಮಾ ನರ್ಮದಾ ಪರಿಕ್ರಮ' ವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ರಾಮನ ವನವಾಸದ ಬಳಿಕ ರಾಮ ವನಗಮನ ಪಥವು ರಾಮ ಸಾಗಿದ ಮಾರ್ಗವನ್ನು ಬಿಂಬಿಸಲಿದೆ. ಹಾಗಾಗಿ ಚಿತ್ರಕೂಟದಿಂದ ಅಮರಕಂಟದವರೆಗೂ ಇದನ್ನು ನಿರ್ಮಿಸಲಾಗುವುದು ಎಂದರು. ಇನ್ನು ಚಂಚಲ್ ಪ್ರಗತಿ ಮಾರ್ಗವನ್ನು ಕೂಡ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.