ಬೆಂಗಳೂರು, ಆ. 15 (DaijiworldNews/MB) : ರಾಜ್ಯದಲ್ಲಿ ಶನಿವಾರ ದಾಖಲೆಯ 8,818 ಪ್ರಕರಣ ಪತ್ತೆಯಾಗಿದ್ದು 114 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ 8,818 ಹೊಸ ಪ್ರಕರಣದೊಂದಿಗೆ ಸೋಂಕಿತರ ಸಂಖ್ಯೆ 2,19,926ಕ್ಕೆ ಏರಿಕೆಯಾಗಿದೆ. ಇನ್ನು 114 ಸೋಂಕಿತರು ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 3,831ಕ್ಕೆ ಏರಿಕೆಯಾಗಿದೆ.
ಇನ್ನು ಇಂದು 6629 ಮಂದಿ ಸೋಂಕಿತರು ಗುಣಮುಖರಾಗಿದ್ದು, ಒಟ್ಟು 134811 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ 81276 ಮಂದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.