ನವದೆಹಲಿ, ಆ 16 (DaijiworldNews/PY): ಅಫ್ಘಾನಿಸ್ತಾನದ ಕಾಬೂಲ್ನ ಗುರುದ್ವಾರದಲ್ಲಿ ಮಾ.15ರಂದು ನಡೆದ ಆತ್ಮಾಹುತಿ ದಾಳಿ ನಡೆಸಿದ್ದ ದಾಳಿಕೋರ ಕೇರಳದ ನಿವಾಸಿ ಮುಹಮ್ಮದ್ ಮುಹ್ಸಿನ್ ಎನ್ನುವ ವಿಚಾರ ದೃಢಪಟ್ಟಿದೆ.
ಸಾಂದರ್ಭಿಕ ಚಿತ್ರ
ದಾಳಿಗೆ ಮುಹಮ್ಮದ್ ಮುಹ್ಸಿನ್ ಕಾರಣ ಎನ್ನುವ ವಿಚಾರವು, ನವದೆಹಲಿಯ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಆತನ ಡಿಎನ್ಎ ಪರೀಕ್ಷೆ ನಡೆಸಿದ್ದ ಸಂದರ್ಭ ದಾಳಿಗೆ ಮುಹಮ್ಮದ್ ಮುಹ್ಸಿನ್ ಕಾರಣ ಎನ್ನುವ ಅಂಶ ತಿಳಿದಿದ್ದು ಅಲ್ಲದೇ, ಎನ್ಐಎಗೆ ಪರೀಕ್ಷೆಯ ವರದಿಯನ್ನು ನೀಡುವುದಾಗಿ ಮೂಲಗಳು ತಿಳಿಸಿವೆ.
ಅಫ್ಘಾನಿಸ್ತಾನದ ಕಾಬೂಲ್ನ ಗುರುದ್ವಾರದಲ್ಲಿನಡೆದಿರುವ ದಾಳಿಯಲ್ಲಿ ಕೇರಳ ಮೂಲದ ಉಗ್ರರು ಇರುವ ವಿಚಾರ ತಿಳಿದ ಹಿನ್ನೆಲೆ ಮುಹಮ್ಮದ್ ಮುಹ್ಸಿನ್ನ ತಾಯಿ ಮೈಮುನಾ ಅಬ್ದುಲ್ಲಾ ಅವರ ರಕ್ತದ ಮಾದರಿಯನ್ನು ಸಂಗ್ರಹ ಮಾಡಲಾಗಿತ್ತು. ಇದಾದ ಬಳಿಕ ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದ ದಾಳಿಕೋರರ ರಕ್ತದ ಮಾದರಿಗಳನ್ನು ತರಿಸಿಕೊಂಡಿದ್ದ ಅಫ್ಘಾನಿಸ್ತಾನದ ಅಧಿಕಾರಿಗಳು ಪರೀಕ್ಷೆ ನಡೆಸಿದ್ದಾರೆ. ಡಿಎನ್ಎ ಪರೀಕ್ಷೆ ನಡೆಸಿದ್ದ ಸಂದರ್ಭ ಆತ್ಮಾಹುತಿ ದಾಳಿಗೆ ಮೈಮುನಾ ಅಬ್ದುಲ್ಲಾ ಪುತ್ರ ಮುಹ್ಸಿನ್ ಎಂದು ತಿಳಿದುಬಂದಿದೆ.
ಮುಹಮ್ಮದ್ ಮುಹ್ಸಿನ್ 1991ರಲ್ಲಿ ಕಾಸರಗೋಡಿನ ಸಮೀಪದ ಗ್ರಾಮವೊಂದರಲ್ಲಿ ಜನಿಸಿದ್ದು, ಈತ ಅಫ್ಘಾನಿಸ್ತಾನದಲ್ಲಿದ್ದ ಭಾರತೀಯ ಉಗ್ರರ ಗುಂಪಿನಲ್ಲಿದ್ದ. ಮಾರ್ಚ್ 15ರಂದು ಗುರುದ್ವಾರದ ಬಳಿ ದಾಳಿ ನಡೆಸಿದ್ದ. ಘನೆಯ ಸಂಬಂಧ ಐಸಿಸ್ ಉಗ್ರರ ಫೋಟೋಗಳನ್ನು ಬಿಡುಗಡೆ ಮಾಡಿದ್ದ ಸಂದರ್ಭ ಈತನ ಗುರುತು ಪತ್ತೆ ಮಾಡಲಾಗಿತ್ತು.