ಬೆಂಗಳೂರು, ಆ. 16 (DaijiworldNews/MB) : ''ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 50 ಲಕ್ಷ ರೈತರಿಗೆ 1 ಸಾವಿರ ಕೋಟಿ.ರೂ. ಬಿಡುಗಡೆಯಾಗಿದೆ'' ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ರಾಜ್ಯದ ರೈತ ಸಮುದಾಯವನ್ನುದ್ದೇಶಿಸಿ ಫೇಸ್ಬುಕ್ ಲೈವ್ನ ಮಾತನಾಡಿದ ಅವರು, ''ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಬಿಡುಗಡೆಯಾದ 1 ಸಾವಿರ ಕೋಟಿ.ರೂ. ಕಳೆದ ಶನಿವಾರ ಬೆಳಗ್ಗೆ 7 ಗಂಟೆಯಿಂದ 50 ಲಕ್ಷ ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ. ರೈತರು ತಮ್ಮ ಖಾತೆಯನ್ನು ಪರಿಶೀಲನೆ ನಡೆಸಬೇಕು'' ಎಂದು ಹೇಳಿದ್ದಾರೆ.
''ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಸರ್ಕಾರ ಎಂದಿಗೂ ರೈತರೊಂದಿಗೆ ಇರುತ್ತದೆ. ಆದಷ್ಟು ಬೇಗ ರೈತ ಮಿತ್ರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹಾಗೆಯೇ ಮಂಗಳವಾರದಿಂದ 2019-20ನೆ ಸಾಲಿನ ಬೆಳೆ ವಿಮೆ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ'' ಎಂದು ಹೇಳಿದ್ದಾರೆ.