ತಿರುವನಂತಪುರಂ, ಆ. 16 (DaijiworldNews/MB) : ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಓಣಂ ಹಬ್ಬದ ಪ್ರಯುಕ್ತವಾಗಿ ಸರ್ಕಾರಿ ನೌಕರರಿಗೆ ಉಡುಗೊರೆ ಘೋಷಿಸಿದ್ದು ಓಣಂ ಹಬ್ಬದ ಪ್ರಯುಕ್ತ 4 ಸಾವಿರ ರೂ. ಬೋನಸ್ ಮತ್ತು 2750 ರೂ.ವರೆಗೆ ಹಬ್ಬದ ಭತ್ಯೆ ನೀಡುವ ತೀರ್ಮಾನ ಕೈಗೊಂಡಿದೆ.
27,360 ರೂ.ವರೆಗಿನ ಸಂಬಳ ಪಡೆಯುವ ನೌಕರರಿಗೆ 4000 ಬೋನಸ್ ಸಿಗಲಿದ್ದು ಇಷ್ಟೇ ಅಲ್ಲದೇ ಎಲ್ಲಾ ನೌಕರರಿಗೆ 15 ಸಾವಿರ ರೂ. ಹಣವನ್ನು ಸರ್ಕಾರ ಮುಂಗಡವಾಗಿ ನೀಡಲಿದೆ. 1000 ದಿಂದ 2750ರವರೆಗೆ ಹಬ್ಬದ ಭತ್ಯೆ ದೊರೆಯಲಿದೆ. ಅಕ್ಟೋಬರ್ನಿಂದ ಆರಂಭವಾಗುವಂತೆ 5 ಕಂತುಗಳಲ್ಲಿ ಮುಂಗಡ ಹಣವನ್ನು ಖಾತೆಯಿಂದ ಕಡಿದುಕೊಳ್ಳಲಿದೆ.