ಬೆಂಗಳೂರು, ಆ. 16 (DaijiworldNews/MB) : ರಾಜ್ಯದಲ್ಲಿ ಮತ್ತೆ 7,040 ಕೊರೊನಾ ಪ್ರಕರಣ ದೃಢವಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,26,966 ಕ್ಕೆ ಏರಿಕೆಯಾಗಿದೆ.
ಹಾಗೆಯೇ ಕಳೆದ 24 ಗಂಟೆಗಳಲ್ಲಿ 124 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು ಈವರೆಗೆ ಒಟ್ಟು 3,947 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಇನ್ನು ರಾಜ್ಯದಲ್ಲಿ ಗುಣಮುಖರಾಗುವ ಪ್ರಮಾಣವು ಕೂಡಾ ಏರಿಕೆಯಾಗುತ್ತಿದ್ದು ರಾಜ್ಯದಲ್ಲಿ ಒಟ್ಟು 6,680 ಮಂದಿ ಗುಣಮುಖರಾಗಿದ್ದಾರೆ. ಈವರಗೆ ರಾಜ್ಯದಲ್ಲಿ 1,41,491 ಸೋಂಕಿತರು ಗುಣಮುಖರಾಗಿದ್ದಾರೆ.
ಇನ್ನು 81,512 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ದಿನ 43,626 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.