ಬೆಂಗಳೂರು, ಆ 17(DaijiworldNews/HR): ಆಗಸ್ಟ್ ೧೧ರಂದು ರಾತ್ರಿ ಕೆ ಜಿ ಹಳ್ಳಿ ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಿಗ್ ಬಾಸ್ ವಿನ್ನರ್, ನಟ ಪ್ರಥಮ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ವಾಟ್ಸಾಪ್ ಮತ್ತು ಫೋನ್ ಕಾಲ್ ನಲ್ಲಿ ಬೆದರಿಕೆ ಮಾಡಲಾಗುತ್ತಿದ್ದು, ಇನ್ನು ಮುಂದೆಯೂ ಹೀಗೆ ಮುಂದುವರೆದರೆ ಕಮೀಷನರ್ ಗೆ ಮತ್ತು ಗೃಹ ಸಚಿವರಿಗೆ ದೂರು ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಗಲಾಭೆಯ ಬಗ್ಗೆ ತನ್ನ ಫೇಸ್ ಬುಕ್ ನಲ್ಲಿ ಪ್ರಥಮ್ ಪೋಸ್ಟ್ ಮಾಡಿದ್ದು, ಆ ಪೋಸ್ಟ್ ನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ವಾರ್ ಶುರುವಾಗಿದೆ. ಇನ್ನು ಈ ಪೋಸ್ಟ್ ಒಂದು ಸಮುದಾಯವನ್ನು ಅವಹೇಳನಕಾರಿ ಮಾಡುವಂತೆ ಇದೆ ಎಂದು ಹೇಳಿದ ತಕ್ಷಣ ಪ್ರಥಮ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ನನ್ನ ಮುಸ್ಲಿಂ ಗೆಳೆಯರ ಮಾತಿಗೆ ಬೆಲೆಕೊಟ್ಟು ಪೋಸ್ಟ್ ಡಿಲೀಟ್ ಮಾಡಿದ್ದೇನೆ. ಹೊರತು ಯಾವುದೇ ಭಯದಿಂದ ಡಿಲೀಟ್ ಮಾಡಿಲ್ಲ. ಆದರೂ ಕೆಲವರು ಅಸಭ್ಯವಾಗಿ ಮೆಸೇಜ್, ಕಾಲ್ ಮಾಡುತ್ತಿದ್ದು ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಪ್ರಥಮ್ ತಿಳಿಸಿದ್ದಾರೆ.
ಅಸಭ್ಯವಾಗಿ ಮೆಸೇಜ್, ಕಾಲ್ ಮಾಡುವವರ ವಿರುದ್ಧ ದೂರು ನೀಡಿದರೆ ನಿಮ್ಮ ಕುಟುಂಬದವರಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಸುಮ್ಮನಿದ್ದೇನೆ ಎಂದು ಹೇಳಿದ್ದಾರೆ.