ಜಮ್ಮು-ಕಾಶ್ಮೀರ, ಆ(DaijiworldNews/HR): ಗಡಿಭಾಗದಲ್ಲಿ ಸದಾ ಹಿಂಸಾತ್ಮಕ ರೀತಿಯ ಕೆಲಸಗಳನ್ನು ಮಾಡುತ್ತಿರುವ ಉಗ್ರರು ಇದೀಗ ಪುಲ್ವಾಮಾ ಜಿಲ್ಲೆ ಸಮೀಪದ ಟುಜಾನ್ ಗ್ರಾಮದಲ್ಲಿರುವ ಸೇತುವೆಯನ್ನು ಸ್ಫೋಟಿಸಲು ಸಂಚು ರೂಪಿಸಿದ್ದರು.
ಆದರೆ ಭದ್ರತಾ ಪಡೆ ಐಇಡಿಯನ್ನು(ಸುಧಾರಿತ ಸ್ಫೋಟಕ ಸಾಧನ) ಪತ್ತೆ ಹಚ್ಚುವ ಮೂಲಕ ಭಾರೀ ಅನಾಹುತ ವಾಗುವುದನ್ನು ತಪ್ಪಿಸಿದಂತಾಗಿದೆ ಎಂದು ತಿಳಿದು ಬಂದಿದೆ.
ಈ ಸೇತುವೆಯು ಟುಜಾನ್ ಮತ್ತು ದಾಲ್ವಾನ್ ಅನ್ನು ಸಂಪರ್ಕಿಸುವುದಾಗಿದೆ. ಹಾಗಾಗಿ ಸೇತುವೆಯನ್ನು ಸ್ಫೋಟಿಸಲು ಸಂಚು ಹೂಡಿ ಉಗ್ರರು ಐಇಡಿಯನ್ನು ಅಡಗಿಸಿಟ್ಟಿದ್ದರು ಆದರೆ ಭದ್ರತಾಪಡೆಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿಸಿದಂತಾಗಿದೆ ಎಂದಿದ್ದಾರೆ ಐಜಿಪಿ ಕಾಶ್ಮೀರ್ ವಿಜಯ್ ಕುಮಾರ್ ತಿಳಿಸಿದ್ದಾರೆ.
ಸೇತುವೆಯ ಅಡಿಯಲ್ಲಿ ಉಗ್ರರು ಐಇಡಿಯನ್ನು ಅಡಗಿಸಿಟ್ಟು ಸ್ಫೋಟಿಸುವ ಸಂಚು ರೂಪಿಸಿದ್ದರು, ಆದರೆ ಇದನ್ನು ಭದ್ರತಾಪಡೆ ವಿಫಲಗೊಳಿಸಿದೆ ಎಂದು ವರದಿ ತಿಳಿಸಿದೆ.