ನವದೆಹಲಿ, ಆ 17 (DaijiworldNews/PY): ದೆಹಲಿಯ ಅಜಯ್ ಮಾಕೇನ್ ಅವರನ್ನು ರಾಜಸ್ತಾನ ಕಾಂಗ್ರೆಸ್ನ ಉಸ್ತುವಾರಿಯಾಗಿ ನೇಮಕ ಮಾಡಿ ಸೋನಿಯಾ ಗಾಂಧಿ ಆದೇಶ ನೀಡಿದ್ದಾರೆ.
ರಾಜ್ಯದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಅವಿನಾಶ್ ಪಾಂಡೆ ಅವರನ್ನು ಕೆಳಗಿಳಿಸಿ ಇದೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಅಜಯ್ ಮಾಕೇನ್ ಅವರನ್ನು ರಾಜಸ್ತಾನನ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಿಸಲಾಗಿದೆ.
ಪಾಂಡೆ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗೆ ತುಂಬಾ ಆಪ್ತರಾಗಿದ್ದಾರೆ. ಅವರ ಪರವಾಗಿ ನ್ಯಾಯಯುತ ವಿಚಾರಣೆಯನ್ನು ನೀಡಿಲ್ಲ ಎಂದು ಸಚಿನ್ ಪೈಲಟ್ ಬಣ ಆರೋಪಿಸಿತ್ತು. ಅಲ್ಲದೇ, ಅವಿನಾಶ್ ಪಾಂಡೆ ಅವರನ್ನು ಆ ಸ್ಥಾನದಿಂದ ಕೆಲಗಿಳಸಬೇಕು ಎಂದು ಒತ್ತಾಯ ಮಾಡಿದ್ದರು.
ಪ್ರಸ್ತುತ ಪಾಂಡೆ ಅವರನ್ನು ಹೈಕಮಾಂಡ್ ತೆಗೆದುಹಾಕಿದ್ದು, ನಿಮ್ಮ ಬೇಡಿಕೆಗಳನ್ನು ಪೂರೈಸುತ್ತೇವೆ ಎಂದಿದೆ. ಸಚಿನ್ ಪೈಲಟ್ ಅವರು ಹೈಕಮಾಂಡ್ನ ಈ ತೀರ್ಮಾನವನ್ನು ಸ್ವಾಗತಿಸಿದ್ದಾರೆ.
ರಾಜಸ್ಥಾನದ ಉಸ್ತುವಾರಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಕ್ಕಾಗಿ ಅಜಯ್ ಮಾಕೆನ್ ಜಿ ಅವರಿಗೆ ಅಭಿನಂದನೆಗಳು. ನಿಮ್ಮ ನೇಮಕಾತಿ ಖಂಡಿತವಾಗಿಯೂ ರಾಜಸ್ಥಾನ ಕಾಂಗ್ರೆಸ್ ಕಾರ್ಯಕರ್ತರ ಭರವಸೆಯನ್ನು ಹೆಚ್ಚಿಸುತ್ತದೆ ಎಂದು ಟ್ವಿಟ್ಟರ್ನಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.