ನವದೆಹಲಿ, ಆ 17 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ ಡಾಲ್ಫಿನ್ ಸಮಗ್ರ ಯೋಜನೆಯನ್ನು 15 ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 74ನೇ ಸ್ವಾತಂತ್ರ್ಯೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿರುವ ಡಾಲ್ಫಿನ್ ಸಮಗ್ರ ಯೋಜನೆಯು ಇನ್ನು 15 ದಿನಗಳಲ್ಲಿ ಬಿಡುಗಡೆಯಾಗಲಿದೆ. ನದಿಗಳಲ್ಲಿ ಹಾಗೂ ಸಾಗರಗಳಲ್ಲಿರುವ ಡಾಲ್ಫಿನ್ಗಳ ಸಂರಕ್ಷಣೆ ಹಾಗೂ ರಕ್ಷಣೆ ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯು ಜೀವವೈವಿಧ್ಯತೆಯನ್ನು ಉತ್ತೇಜಿಸುತ್ತದೆ ಅಲ್ಲದೇ, ಉದ್ಯೋಗ ಅವಕಾಶಗಳನ್ನು ಸೃಷ್ಠಿಸುತ್ತದೆ. ಇದರೊಂದಿಗೆ ಪ್ರವಾಸೋದ್ಯಮದ ಕೇಂದ್ರವಾಗಲಿದೆ ಎಂದು ಪ್ರಧಾನಿ ಮೋದಿ ಅವರು 74ನೇ ಸ್ವಾತಂತ್ರ್ಯೋತ್ಸವ ದಿನದಂದು ತಿಳಿಸಿದ್ದರು.
2010ರಲ್ಲಿ ಗಂಗಾ ನದಿಯ ಡಾಲ್ಫಿನ್ಗಳನ್ನು ರಾಷ್ಟ್ರೀಯ ಜಲಚರ ಪ್ರಾಣಿಗಳು ಎಂದು ಘೋಷಣೆ ಮಾಡಲಾಗಿತ್ತು.