ನವದೆಹಲಿ, ಆ. 18 (DaijiworldNews/MB) : ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಜಸ್ರಾಜ್ ಅವರು ಅಮೆರಿಕಾದ ನ್ಯೂ ಜರ್ಸಿಯಲ್ಲಿ ನಿಧನಹೊಂದಿದ್ದಾರೆ.
90 ವರ್ಷದ ಜಸರಾಜ್ ಅವರು ಸುಮಾರು 80 ವರ್ಷಗಳ ಕಾಲ ಸಂಗೀತದ ವೃತ್ತಿ ಜೀವನವನ್ನು ನಡೆಸಿದ್ದಾರೆ. ಅವರ ತಂದೆ ತೀರಾ ಸಣ್ಣ ಪ್ರಾಯದಲ್ಲೇ ಸಂಗೀತ ಕ್ಷೇತ್ರಕ್ಕೆ ಪರಿಚಯಿಸಿದ್ದು ಅವರಿಗೆ ಭಾರತದ ಸರ್ವೋಚ್ಛ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ ಹಾಗೂ ಪದ್ಮಭೂಷಣ್ ನೀಡಿ ಗೌರವಿಸಲಾಗಿತ್ತು.
ಇನ್ನು ಅವರ ಸೋದರ ಪಂಡಿತ್ ಪ್ರತಾಪ್ ನಾರಾಯಣ ಅವರಿಗೆ ತಬಲಾ ವಾದಕರೂ ಆಗಿದ್ದರು.