ನವದೆಹಲಿ, ಆ 18 (Daijiworld News/MSP): ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ, ಮುಖ್ಯ ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಶಾ (67) ಅವರಿಗೂ ಕೊರೊನಾ ಸೋಂಕು ತಗುಲಿದೆ.
ಈ ಬಗ್ಗೆ ಅವರೇ ಟ್ವೀಟಿಸಿದ್ದು,'ನನಗೆ ಪರೀಕ್ಷೆಯಲ್ಲಿ ಪಾಸಿಟಿವ್ ಬರುವ ಮೂಲಕ ಕೋವಿಡ್ ಪಟ್ಟಿಗೆ ಸೇರ್ಪಡೆಯಾಗಿದ್ದೇವೆ. ಸೋಂಕಿನ ಕೆಲವು ಲಕ್ಷಣಗಳು ಕಾಣಿಸಿಕೊಂಡಿವೆ' ಎಂದು ಬರೆದುಕೊಂಡಿದ್ದಾರೆ.
ಕಿರಣ್ ಮಜುಂದಾರ್ ತಮ್ಮ ಸ್ವಂತ ಬಲದಿಂದ 'ಬಯೋಕಾನ್' ಸಂಸ್ಥೆಯನ್ನು ಸ್ಥಾಪಿಸಿ ವಿಶ್ವದ ಪ್ರತಿಷ್ಠಿತ ಸಂಸ್ಥೆಯಾಗಿ ಪರಿವರ್ತಿಸಿದ್ದಾರೆ.
ಇನ್ನು ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ' ಶೀಘ್ರವೇ ಗುಣಮುಖರಾಗಿ ಮತ್ತು ಧೃಢಕಾಯರಾಗಿ ಮರಳಲು ಬಯಸುತ್ತೇನೆ. ಆರೋಗ್ಯದಿಂದಿರು ಸ್ನೇಹಿತೆ' ಎಂದಿದ್ದಾರೆ.