ನವದೆಹಲಿ, ಆ 18 (Daijiworld News/MSP): ಭಾರತದಲ್ಲೇ ಅಭಿವೃದ್ದಿಪಡಿಸಲಾಗಿದ ದೇಶಿಯ ರಕ್ಷಣಾ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳ ರಪ್ತು ಮಾಡಲು ಕೇಂದ್ರ ಸರ್ಕಾರ ನೀಲನಕ್ಷೆಯೊಂದನ್ನು ರೂಪಿಸಿದ್ದು , ಈ ಮೂಲಕ ಸ್ವಾವಲಂಬಿ ಭಾರತದತ್ತ ದೃಢವಾದ ಹೆಜ್ಜೆ ಇಡುವ ಮೂನ್ಸೂಚನೆ ನೀಡಿದೆ.
ಭಾರತದಲ್ಲೇ ತಯಾರಾದ ರಕ್ಷಣಾ ಸಾಮಾಗ್ರಿ ಹಾಗೂ ಶಸ್ತ್ರಾಸ್ತ್ರಗಳ ರಪ್ತು ಮಾಡುವ ಈ ಯೋಜನೆಗೆ ರಾಜತಾಂತ್ರಿಕ ಮಾರ್ಗಗಳನ್ನೂ ಬಳಸಿಕೊಳ್ಳಲಾಗುವುದು ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ
ಇದಕ್ಕಾಗಿ ಕೊರೊನಾ ಸಂಕ್ರಾಮಿಕದಿಂದ ಮುಕ್ತವಾಗುವವರೆಗೆ ಭಾರತದ ಸ್ನೇಹಪರ ರಾಷ್ಟ್ರಗಳೊಂದಿಗೆ, ದೇಶಿ ರಕ್ಷಣಾ ಉಪಕರಣ ಉದ್ಯಮದ ಪ್ರತಿನಿಧಿಗಳು ವೆಬ್ ಸಂವಹನದ ಮೂಲಕವೇ ವ್ಯವಹಾರ, ಮಾತುಕತೆ ನಡೆಯಲಿದೆ. ಈ ಮೂಲಕ ಆಯಾ ದೇಶಗಳ ಅವಶ್ಯಕತೆ ಹಾಗೂ ಬೇಡಿಕೆಗಳನ್ನು ಅರಿಯಲಿದ್ದಾರೆ.
ರಕ್ಷಣಾ ಉತ್ಪಾದನೆ ಇಲಾಖೆಯ ಕಾರ್ಯದರ್ಶಿ ರಾಜ್ ಕುಮಾರ್ " ದೇಶೀಯವಾಗಿ ಉತ್ಪಾದಿಸಿರುವ ಶಸ್ತ್ರಾಸ್ತ್ರಗಳನ್ನು ಸ್ನೇಹಪರ ರಾಷ್ಟ್ರಗಳಿಗೆ ರಫ್ತು ಮಾಡಲು ಯೋಜನೆ ರೂಪಿಸಲಾಗಿದೆ " ಎಂದು ತಿಳಿಸಿದ್ದಾರೆ.
ದೇಶಿ ರಕ್ಷಣಾ ಉಪಕರಣ ಉದ್ಯಮವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇತ್ತಿಚೇಗೆ ಪ್ರಮುಖ ನೀತಿಯೊಂದನ್ನು ಪ್ರಕಟಿಸಿ ಈ ಮೂಲಕ ಒಟ್ಟು 101 ಬಗೆಯ ರಕ್ಷಣಾ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳ ಆಮದನ್ನು ಹಂತ ಹಂತವಾಗಿ ನಿಷೇಧಿಸುವ ಬಗ್ಗೆ ಮಾಹಿತಿ ನೀಡಿದ್ದರು.