ಜಮ್ಮು-ಕಾಶ್ಮೀರ, ಆ 18 (DaijiworldNews/PY): ಕಳೆದ ರಾತ್ರಿಯಿಂದ ಭದ್ರತಾ ಪಡೆಗಳು ಬಾರಾಮುಲ್ಲಾ ಜಿಲ್ಲೆಯಲ್ಲಿ ಕಾರ್ಯಚರಣೆ ನಡೆಸುತ್ತಿದ್ದು, ಈ ಕಾರ್ಯಾಚರಣೆಯಲ್ಲಿ ಲಷ್ಕರ್-ಇ-ತೊಯ್ಬಾ ಸಂಘಟನೆಯ ಇಬ್ಬರು ಉಗ್ರರನ್ನು ಸದೆಬಡೆದಿದ್ದಾರೆ.
ಭದ್ರತಾ ಪಡೆ ನಡೆಸಿದ ಎರಡನೇ ಎನ್ಕೌಂಟರ್ ವೇಳೆ ಓರ್ವ ಯೋಧರಿಗೂ ಕೂಡಾ ಗಾಯವಾಗಿದ್ದು ಅವರನ್ನು ಶ್ರೀನಗರದ ಸೇನಾಸ್ಪತ್ರೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಾರ್ಯಚರಣೆಯ ವೇಳೆ ಭದ್ರತಾ ಪಡೆಯು ಲಷ್ಕರ್ ಎ ತೊಯ್ಬಾದ ಉನ್ನತ ಕಮಾಂಡರ್ ಸಜ್ಜಾದ್ನನ್ನು ಹತ್ಯೆಗೈದಿದ್ದು, ಸೇನೆ ಮಾಡಿರುವ ಉತ್ತಮ ಕಾರ್ಯವಾಗಿದೆ. ಸಜ್ಜಾದ್ ಹತ್ಯೆಯ ಬಳಿಕ ಸುಮಾರು 20 ಮಂದಿ ಯುವಕರನ್ನು ನಾವು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಡಿಜಿಪಿ ದಿಲ್ ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ.
ಸೋಮವಾರ ಸಂಜೆ ಎನ್ಕೌಂಟರ್ ನಡೆಸಿದ ಭದ್ರತಾ ಪಡೆಗಳು ಲಷ್ಕರ್ ಎ ತೊಯ್ಬಾದ ಉನ್ನತ ಕಮಾಂಡರ್ ಸಜ್ಜಾದ್ನನ್ನು ಹತ್ಯೆಗೈದಿದ್ದರು. ನಂತರ ಪ್ರದೇಶಕ್ಕೆ ಧಾವಿಸಿದ ಪೊಲೀಸರು, ಸಿಆರ್ ಪಿಎಫ್ ಮತ್ತು ಸೇನಾ ಸೈನಿಕರು ಇಬ್ಬರು ಉಗ್ರರನ್ನು ಸದೆಬಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಉಗ್ರಗಾಮಿ ಸಂಘಟನೆಗೆ ನೂತನವಾಗಿ ನೇಮಕಗೊಂಡಿದ್ದ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ.