ನವದೆಹಲಿ, ಆ 18 (DaijiworldNews/PY): ಚುನಾವಣಾ ವಿಷಯದಲ್ಲಿ ಫೇಸ್ಬುಕ್ ಹಸ್ತಕ್ಷೇಪ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಮಂಗಳವಾರ ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ಗೆ ಪತ್ರ ಬರೆದಿದೆ.
ಫೇಸ್ಬುಕ್ ನಾಯಕತ್ವದ ತಂಡದ ನಡವಳಿಕೆ ಮತ್ತು ಅದರ ಕಾರ್ಯಾಚರಣೆಗಳ ಬಗ್ಗೆ ಸಮಯಕ್ಕೆ ತಕ್ಕಂತೆ ಉನ್ನತ ಮಟ್ಟದ ವಿಚಾರಣೆಗೆ ಒತ್ತಾಯಿಸಿದೆ.
ಕಾಂಗ್ರೆಸ್ ಜುಕರ್ಬರ್ಗ್ಗೆ ಬರೆದ ಪತ್ರದಲ್ಲಿ, ಆಂತರಿಕ ತನಿಖೆ ಮತ್ತು ವರದಿಯನ್ನು ಸಲ್ಲಿಸಲು ಬಾಕಿ ಉಳಿದಿದೆ. ಕಂಪನಿಯು, ತನಿಖೆಯ ಮೇಲೆ ಪ್ರಭಾವ ಬೀರದಂತೆ ಫೇಸ್ಬುಕ್ ಇಂಡಿಯಾ ಕಾರ್ಯಾಚರಣೆಯನ್ನು ಮುನ್ನಡೆಸಲು ಹೊಸ ತಂಡವನ್ನು ಪರಿಗಣಿಸಬೇಕು ಎಂದು ಹೇಳಿದೆ.
ಫೇಸ್ಬುಕ್ ನಾಯಕತ್ವ ತಂಡ ಮತ್ತು ಅದರ ಕಾರ್ಯಾಚರಣೆಗಳ ಬಗ್ಗೆ ಫೇಸ್ಬುಕ್ ಕೇಂದ್ರ ಕಚೇರಿಯಿಂದ ಉನ್ನತ ಮಟ್ಟದ ಸಮಿತಿ ರಚಿಸಿ ವಿಚಾರಣೆ ಮಾಡಬೇಕು ಹಾಗೂ ಒಂದು ಅಥವಾ ಎರಡು ತಿಂಗಳೊಳಗೆ ವರದಿಯನ್ನು ಸಲ್ಲಿಸಬೇಕು. ಅಲ್ಲದೇ, ವರದಿಯನ್ನು ಬಹಿರಂಗಗೊಳಿಸಬೇಕು ಎಂದು ವೇಣುಗೋಪಾಲ್ ಪತ್ರದಲ್ಲಿ ತಿಳಿಸಿದ್ದಾರೆ.
ಬಿಜೆಪಿ ನಾಯಕರ ಮೇಲೆ ಫೇಸ್ಬುಕ್ ತನ್ನ ದ್ವೇಷ ಭಾಷಣ ನಿಯಮಗಳನ್ನು ಅನ್ವಯಿಸಿಲ್ಲ ಎಂದಿದ್ದ ಅಮೆರಿಕ ಮಾಧ್ಯಮವೊಂದು ವರದಿಯೊಂದನ್ನು ಉಲ್ಲೇಖಿಸಿದ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸಾಮಾಜಿಕ ಮಾಧ್ಯಮದ ಮೇಲೆ ಆಕ್ರೋಶಗೊಂಡಿದ್ದರು.
ಕಂಪನಿಯ ಸಾಮಾಜಿಕ ಮಾಧ್ಯಮ ವೇದಿಕೆಯು ದ್ವೇಷದ ಮಾತು ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ವಿಷಯವನ್ನು ನಿಷೇಧಿಸುತ್ತದೆ ಎಂದು ಹೇಳಿದೆ ಎಂದು ಫೇಸ್ಬುಕ್ ತಿಳಿಸಿತ್ತು.