ಉತ್ತರಪ್ರದೇಶ, ಆ 18 (DaijiworldNews/PY): ಹಿಂದಿನ ಎಸ್ಪಿ ಹಾಗೂ ಈಗಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಯಾವುದೇ ಮಹತ್ವವಾದ ವ್ಯತ್ಯಾಸವಿಲ್ಲ ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ದಲಿತರು ಸೇರಿದಂತೆ ಎಲ್ಲಾ ವರ್ಗಗಳ ಜನರ ಮೇಲೆ ಅವಮಾನ, ದಬ್ಬಾಳಿಕೆ, ಅತ್ಯಾಚಾರ, ಕೊಲೆ ಇತ್ಯಾದಿ ಘಟನೆಗಳು ನಡೆಯುತ್ತಿವೆ. ರಾಜ್ಯದ ಕಾನೂನ ವ್ಯವಸ್ಥೆ ಹೀನಾಯವಾಗಿದೆ. ಈ ವಿಚಾರದ ಬಗ್ಗೆ ಸರ್ಕಾರ ಚಿತ್ತವಹಿಸಬೇಕು ಎಂದಿದ್ದಾರೆ.
ಎಸ್ಪಿ ಮತ್ತು ಬಿಜೆಪಿ ಸರ್ಕಾರದ ಕಾರ್ಯಶೈಲಿಯಲ್ಲಿ ಯಾವುದೇ ಮಹತ್ವವಾದ ವ್ಯತ್ಯಾಸ ಕಾಣುತ್ತಿಲ್ಲ. ಕಾಂಗ್ರೆಸ್ ಪಕ್ಷದ ಆಡಳಿತದಡಿಯಲ್ಲಿ ಸಂತ್ರಸ್ತರ ಎಫ್ಐಆರ್ಗಳನ್ನು ಸಹ ಇಲ್ಲಿ ದಾಖಲಿಸಲಾಗಿಲ್ಲ. ಅಲ್ಲದೆ, ಆ ಸಮಯದಲ್ಲಿ ಮಾಧ್ಯಮಗಳು ಇಂದಿನಷ್ಟು ಸಕ್ರಿಯವಾಗಿರಲಿಲ್ಲಎಂದು ತಿಳಿಸಿದ್ದಾರೆ.