ಬಂಡಿಪೋರ, ಆ. 19 (DaijiworldNews/MB) : ಲಷ್ಕರ್-ಇ-ತೊಯ್ಬಾ ಸಂಘಟನೆಯ ಓರ್ವ ಉಗ್ರನನ್ನು ಭದ್ರತಾ ಪಡೆಗಳು ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಬಂಧಿಸಿದೆ.
ಬಂಧಿತ ಉಗ್ರ ಶೋಪಿಜಾನ್ ಜಿಲ್ಲೆಯ ಅವ್ನೀರಾ ಪ್ರದೇಶದ ನಿವಾಸಿ ಸಬ್ಜರ್ ಅಹ್ಮದ್ ಅಲಿಯಾಗ್ ಆತಿಶ್ ಭಾಯ್ ಎಂದು ಹೇಳಲಾಗಿದೆ. ಇನ್ನು ಬಂಧಿತನ ಬಳಿಯಿದ್ದ ಸ್ಫೋಟಕ ವಸ್ತುಗಳು, ಶಸ್ತ್ರಾಸ್ತ್ರಗಳು, ನಿಯತಕಾಲಿಕೆಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದೆ.
ಸೋಮವಾರ ಸಂಜೆ ಎನ್ಕೌಂಟರ್ ನಡೆಸಿದ ಭದ್ರತಾ ಪಡೆಗಳು ಲಷ್ಕರ್ ಎ ತೊಯ್ಬಾದ ಉನ್ನತ ಕಮಾಂಡರ್ ಸಜ್ಜಾದ್ನನ್ನು ಹತ್ಯೆಗೈದಿದ್ದರು.
ಸೋಮವಾರ ರಾತ್ರಿ ಭದ್ರತಾ ಪಡೆಗಳು ಬಾರಾಮುಲ್ಲಾ ಜಿಲ್ಲೆಯಲ್ಲಿ ಕಾರ್ಯಚರಣೆ ನಡೆಸಿ, ಲಷ್ಕರ್-ಇ-ತೊಯ್ಬಾ ಸಂಘಟನೆಯ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದರು.