ಕೋಯಿಕ್ಕೋಡು, ಆ 19 (DaijiworldNews/HR): ಕೋಯಿಕ್ಕೋಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಆಗಸ್ಟ್ 7 ರಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಅಪಘಾತಕ್ಕೀಡಾದಾಗ ಪ್ರಯಾಣಿಕರನ್ನು ರಕ್ಷಿಸಲು ಸಹಾಯ ಮಾಡಿದ ಹತ್ತು ಮಂದಿಗೆ ಕೋವಿಡ್ -19 ದೃಢವಾಗಿದೆ.
ಅಪಘಾತದಲ್ಲಿ ಗಾಯಗೊಂಡ ಕೆಲವು ಪ್ರಯಾಣಿಕರು ಕೋವಿಡ್ -19 ಪಾಸಿಟಿವ್ ಬಂದ ಬಳಿಕ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸುಮಾರು 80 ಸ್ಥಳೀಯರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
ಇನ್ನು ಕಳೆದ ವಾರದಲ್ಲಿ ಮಲಪ್ಪುರಂ ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು ಮತ್ತು 23 ಹಿರಿಯ ಅಧಿಕಾರಿಗಳಿಗೂ ಸಹ ಕೊರೋನಾ ಪಾಸಿಟಿವ್ ಬಂದಿತ್ತು. ನಂತರ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರೊಂದಿಗಿದ್ದ ಏಳು ಕ್ಯಾಬಿನೆಟ್ ಸಹೋದ್ಯೋಗಿಗಳು ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲೆಯ ಅಧಿಕಾರಿಗಳೊಂದಿಗೆ ನಿಕಟವಾಗಿ ಸಂವಹನ ನಡೆಸಿದ್ದರಿಂದ ಅವರು ಐಸಲೂಷನ್ ಆಗಿದ್ದರು.
190 ಪ್ರಯಾಣಿಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಸಹಕರಿಸಿದ ಸ್ಥಳೀಯ ಜನರಿಗೆ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಶ್ಲಾಘಿಸಿದ್ದರು.