ಬೆಂಗಳೂರು, ಆ. 19 (DaijiworldNews/MB) : ''ಬೆಂಗಳೂರಿನ ಕೆ. ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಗಲಭೆಕೋರರಿಗೆ ಎರಡು ಉಗ್ರ ಗುಂಪುಗಳ ಸಂಪರ್ಕ ಇರುವುದು ಎನ್ಐಎ ತನಿಖೆಯಲ್ಲಿ ತಿಳಿದು ಬಂದಿದೆ'' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್ ಟಿ ನಗರದಲ್ಲಿ ರುವ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ಎನ್ಐಎ ದೇಶ ವಿರೋಧಿ ಚಟುವಟಿಕೆಗಳ ವಿರುದ್ದ ಜಂಟಿ ಕಾರ್ಯಾಚರಣೆಯನ್ನು ಮುಂದುವರೆಯಲಿದೆ. ಈಗಾಗಲೇ ಐಸಿಸ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಕಾರಣ ಬೆಂಗಳೂರಿನ ಎಂಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನ ನೇತ್ರ ವೈದ್ಯನನ್ನು ಹಾಗೂ ಆತನ ಸಹಚರರನ್ನು ಎನ್ಐಎ ಬಂಧಿಸಿದೆ. ಕೆಲ ಪ್ರಕರಣಗಳಲ್ಲಿ ನಾವು ಅವರಿಗೆ, ಅವರು ನಮಗೆ ಸಹಕಾರ ನೀಡುವುದು ಮುಂದುವರೆಯುತ್ತದೆ'' ಎಂದು ಹೇಳಿದ್ದಾರೆ.
''ಇನ್ನು ತನಿಖೆಯ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದೆ. ದೇಶದಲ್ಲಿ ಗಡಿಯಾಚೆಗಿನ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿದ್ದ ಅದರ ವಿರುದ್ದ ಜಂಟಿ ಕಾರ್ಯಾಚರಣೆ ನಡೆಸುವುದು ಅತ್ಯಗತ್ಯವಾಗಿದೆ. ನಾವು ಈ ಪ್ರಕ್ರಿಯೆ ಮುಂದುವರೆಸಲಿದ್ದೇವೆ'' ಎಂದು ತಿಳಿಸಿದ್ದಾರೆ.