ಬೆಂಗಳೂರು, ಆ. 19, (DaijiworldNews/SM): ರಾಜ್ಯದಲ್ಲಿ ಕೊರೊನಾ ಸೋಂಕಿತರನ್ನು ಪತ್ತೆ ಮಾಡಲು, ನಿಗದಿಪಡಿಸಿದ ಗುರಿಯಂತೆ ಪರೀಕ್ಷೆ ನಡೆಸಲಾಗುವುದೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದು, ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಕೋವಿಡ್ ಪರೀಕ್ಷೆಯ ವರದಿಗಾಗಿ ಆಸ್ಪತ್ರೆಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲ. ಇನ್ನು ಮುಂದೆ ವೆಬ್ ಸೈಟ್ ನಲ್ಲೇ ಪರೀಕ್ಷಾ ವರದಿ ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಕೊರೊನಾ ಪರೀಕ್ಷೆ ಮಾಡಿಸಿಕೊಂಡವರು www.covidwar.karnataka.gov.in/service1 ನಲ್ಲಿ ವರದಿ ಪಡೆಯಬಹುದಾಗಿದೆ. ತಮ್ಮ ಎಸ್ಆರ್ ಎಫ್ ಗುರುತು ಬಳಸಿ ವರದಿ ಪಡೆಯಬಹುದೆಂದು ಮಾಹಿತಿ ನೀಡಿದ್ದಾರೆ.
ಕೊರೊನಾ ಸೋಂಕಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಮಾಡಿದರೆ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಬಹುದು. ಆದ್ದರಿಂದ ಪ್ರತಿ ಪ್ರಯೋಗಾಲಯಗಳಲ್ಲಿ ನಿಗದಿ ಮಾಡಿದಷ್ಟು ಸಂಖ್ಯೆಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಸಚಿವರು ತಿಳಿಸಿದ್ದಾರೆ.